alex Certify
ಕನ್ನಡ ದುನಿಯಾ       Mobile App
       

Kannada Duniya

ಇದು 2019 ರ ವಿಶ್ವಕಪ್ ಎದುರಿಸುವ ಭಾರತದ ತಂಡ…!

ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ, 2019ರಲ್ಲಿ ನಡೆಯುವ ವಿಶ್ವಕಪ್ ಗೆ ಟೀಂ ಇಂಡಿಯಾ ಹೇಗಿರಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನ ಮಾತನಾಡಿದ ಶಾಸ್ತ್ರಿ, ಐಸಿಸಿ 2019 ವಿಶ್ವಕಪ್ ಗೆ ಭಾರತ ತಂಡ ಬಹುತೇಕ ಫೈನಲ್ ಆಗಿದೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ತಂಡವೇ ವಿಶ್ವಕಪ್ ಆಡಲಿದೆ ಎಂದು ಸೂಚನೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಪಂದ್ಯಕ್ಕೆ ಇನ್ನೂ ಟೀಂ ಇಂಡಿಯಾ ಘೋಷಣೆಯಾಗಿಲ್ಲ. ಶೀಘ್ರವೇ ಆಯ್ಕೆ ಸಮಿತಿ 15 ಆಟಗಾರರ ತಂಡವನ್ನು ಘೋಷಣೆ ಮಾಡಲಿದೆ. ವಿಶ್ವಕಪ್ 2019 ಗಮನದಲ್ಲಿಟ್ಟುಕೊಂಡು ಆಯ್ಕೆ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಆಟವಾಡಿದ ತಂಡವೇ ವಿಶ್ವಕಪ್ ಗಾಗಿ ಸೆಣೆಸಲಿದೆ.

ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 21 ರಿಂದ ಟಿ-20 ಪಂದ್ಯ ಶುರುವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಮೂರು ಟಿ-20 ಪಂದ್ಯವನ್ನಾಡಲಿದೆ. ನಂತ್ರ ಟೆಸ್ಟ್ ಸರಣಿ ನಡೆಯಲಿದೆ. ಕೊನೆಯಲ್ಲಿ ಏಕದಿನ ಸರಣಿ ನಡೆಯಲಿದೆ. ಸರಣಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದೇ ಕೊನೆ ಸರಣಿಯಾಗಲಿದ್ದು, ನಂತ್ರ ತಂಡ ವಿಶ್ವಕಪ್ ಗೆ ಸಿದ್ಧವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...