alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಕ್ರಿಕೆಟ್ ತಂಡದಲ್ಲಿ ಮತ್ತೆ ಕಿರಿಕ್

pak-criket

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಟೆಸ್ಟ್ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಅವರನ್ನು ಕೋಚ್ ಮಿಕ್ಕಿ ಆರ್ಥರ್ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಲಾಹೋರ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚ್ ಮಿಕ್ಕಿ ಆರ್ಥರ್ ತಮ್ಮನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾಗಿ ಅಕ್ಮಲ್ ಆರೋಪಿಸಿದ್ದು, ಇದಕ್ಕೆ ಇಂಜಮಾಮ್ ಭಾಯ್ ಮತ್ತು ಮುಷ್ತಾಕ್ ಭಾಯ್ ಸಾಕ್ಷಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಉಮರ್ ಅಕ್ಮಲ್ ಈ ರೀತಿ ಬಹಿರಂಗ ಹೇಳಿಕೆ ನೀಡಿರುವುದು ಪಾಕ್ ಕ್ರಿಕೆಟ್ ಮಂಡಳಿಗೆ ನುಂಗಲಾರದ ತುತ್ತಾಗಿದೆ.

ಉಮರ್ ಅಕ್ಮಲ್ ಅವರನ್ನು ಫಿಟ್ ನೆಸ್ ಸಮಸ್ಯೆಯ ಕಾರಣಕ್ಕೆ ತಂಡದಿಂದ ಕೈ ಬಿಡಲಾಗಿದೆ. ಚಾಂಪಿಯನ್ಸ್ ಟ್ರೋಫಿಗೂ ಅವರನ್ನು ಪರಿಗಣಿಸಲಾಗಿರಲಿಲ್ಲ.

ಅಭ್ಯಾಸಕ್ಕಾಗಿ ಅವರು ಅಕಾಡೆಮಿಗೆ ತೆರಳಿದ್ದ ಸಂದರ್ಭದಲ್ಲಿ ಆರ್ಥರ್, ಗುತ್ತಿಗೆ ರದ್ದಾಗುವುದರಿಂದ ತರಬೇತಿಯಲ್ಲಿ ಪಾಲ್ಗೊಳ್ಳದಿರಲು ಸೂಚಿಸಿದ್ದಾರೆ. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ನಿಂದಿಸಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಉಮರ್ ಅಕ್ಮಲ್, ನಾನು ನೀಡಿರುವ ಹೇಳಿಕೆ ಬಗ್ಗೆ ಬದ್ಧನಾಗಿದ್ದೇನೆ. ಆರ್ಥರ್ ನನ್ನನ್ನು ನಿಂದಿಸಿದ್ದಾರೆ ಎಂದು ದೂರಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಅಕ್ಮಲ್ ಗೆ ನೋಟಿಸ್ ನೀಡಲಾಗುವುದು. ಅಕ್ಮಲ್ ಅವರೊಂದಿಗಿನ ಒಪ್ಪಂದ ಮುಗಿದಿದ್ದರೂ, 1 ವರ್ಷ ಅವರು ಷರತ್ತುಗಳಿಗೆ ಬದ್ಧವಾಗಿರಬೇಕಾಗುತ್ತದೆ. ಹಾಗಾಗಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಪಿಸಿಬಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...