alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಗೂಲಿ ವಿರುದ್ಧ ಗರಂ ಆದ ರವಿಶಾಸ್ತ್ರಿ

shastri-ganguly-2806

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಕನ್ನಡಿಗ ಅನಿಲ್ ಕುಂಬ್ಳೆ ನೇಮಕವಾಗಿದ್ದಾರೆ. ಈ ಹುದ್ದೆಗೆ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿ, ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ವಿರುದ್ಧ ಬೇಸರದ ಮಾತುಗಳನ್ನಾಡಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕರಾದ ಸೌರವ್ ಗಂಗೂಲಿ ಅವರ ಬಗ್ಗೆ ನಾನು ಯಾವುದೇ ಭಿನ್ನಾಭಿಪ್ರಾಯ ಹೊಂದಿಲ್ಲ. ಆದರೆ, ನಾನು ಸಂದರ್ಶನಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ ಸೌರವ್ ಗಂಗೂಲಿ ಅಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ಸಮಿತಿಯ ಸದಸ್ಯರಾಗಿದ್ದ ಸಚಿನ್ ತೆಂಡೂಲ್ಕರ್ ಲಂಡನ್ ನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂದರ್ಶನ ನಡೆಸಿದರು. ವಿ.ವಿ.ಎಸ್. ಲಕ್ಷ್ಮಣ್, ತಂಡದ ಸಂಯೋಜಕ ಸಂಜಯ್ ಜಗದಾಳೆ ಹಾಜರಿದ್ದರು. ಆದರೆ, ಸೌರವ್ ಗಂಗೂಲಿ ಸಂದರ್ಶನಕ್ಕೆ ಹಾಜರಾಗದೇ ಅಗೌರವ ತೋರಿದ್ದು, ಬೇಸರ ತರಿಸಿದೆ ಎಂದು ಹೇಳಿದ್ದಾರೆ.

ಮುಂದೆ ಇಂತಹ ಮಹತ್ವದ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಸಂದರ್ಶನ ನಡೆಸಿದರೆ ಸೌರವ್ ಗಂಗೂಲಿ ಹಾಜರಾಗಲಿ ಎಂದು ಸಲಹೆ ನೀಡಿರುವ ರವಿಶಾಸ್ತ್ರಿ, ಕೋಚ್ ಹುದ್ದೆಗೆ ನೇಮಕವಾಗಿರುವ ಅನಿಲ್ ಕುಂಬ್ಳೆ ಅವಧಿಯಲ್ಲಿ ಯಶಸ್ಸು ಗಳಿಸಲಿ ಎಂದು ಶುಭಹಾರೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...