alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಒಪ್ಪಂದದಲ್ಲಿ ಭಾರೀ ಬದಲಾವಣೆ

kohli_kumble_1495370771_749x421

ಟೆಸ್ಟ್, ಏಕದಿನ ಪಂದ್ಯ ಹಾಗೂ ಟಿ ಟ್ವೆಂಟಿ ಕ್ರಿಕೆಟ್  ಆಟಗಾರರ ಜೊತೆ ಬೇರೆ ಬೇರೆ ಒಪ್ಪಂದ ಮಾಡಿಕೊಳ್ಳಲು ಕ್ರಿಕೆಟ್ ಆಡಳಿತಗಾರರ ಸಮಿತಿ (ಸಿಒಎ) ಒಪ್ಪಿಗೆ ನೀಡಿದೆ. ಭಾನುವಾರ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಜೊತೆ ಸಿಒಎ ತಂಡ ಮಾತುಕತೆ ನಡೆಸಿದೆ.

ಮಾತುಕತೆ ನಂತ್ರ ಸಿಒಎ ತಂಡ ಬೇರೆ ಬೇರೆ ಒಪ್ಪಂದ ಮಾಡಿಕೊಳ್ಳಲು ಒಪ್ಪಿಕೊಂಡಿದೆ. ಆದ್ರೆ ಒಪ್ಪಂದದ ಮೊತ್ತ ಬಹಿರಂಗವಾಗಿಲ್ಲ. ಈ ಹಿಂದೆ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬೇರೆ ಬೇರೆ ಒಪ್ಪಂದ ಮಾಡಿಕೊಳ್ಳುವಂತೆ ಮನವಿ ಮಾಡಿದ್ದರು. ಟೆಸ್ಟ್, ಏಕದಿನ ಪಂದ್ಯ ಹಾಗೂ ಟಿ ಟ್ವೆಂಟಿ ಪಂದ್ಯ ಆಡುವ ಆಟಗಾರರಿಗೆ ಎರಡು ಪ್ರತ್ಯೇಕ ಒಪ್ಪಂದ ಮಾಡುವಂತೆ ಕೊಹ್ಲಿ ಹೇಳಿದ್ದರು. ಕೊಹ್ಲಿ ಈ ಒಪ್ಪಂದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದ ಸಮಿತಿ, ಐಪಿಎಲ್-10ನೇ ಆವೃತ್ತಿ ನಂತ್ರ ಮಾತುಕತೆ ನಡೆಸುವುದಾಗಿ ಹೇಳಿತ್ತು.

ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಲ್ಲಿ ಆಟಗಾರರಿಗೆ ಬೇರೆ ಬೇರೆ ಮೊತ್ತ ಸಿಗಲಿದೆ. ಎಂ.ಎಸ್. ಧೋನಿ ಕೇವಲ ಏಕದಿನ ಪಂದ್ಯ ಹಾಗೂ ಟಿ-ಟ್ವೆಂಟಿ ಪಂದ್ಯವನ್ನಾಡ್ತಿದ್ದಾರೆ. ಹಾಗಾಗಿ ಅವರಿಗೆ 5 ಕೋಟಿ ರೂಪಾಯಿ ಸಿಗಲಿದೆ. ಟೆಸ್ಟ್ ಆಡುವ ಚೇತೇಶ್ವರ್ ಪೂಜಾರ್ ಗೆ ಕೂಡ 5 ಕೋಟಿ ಸಿಗಲಿದೆ. ಆದ್ರೆ ಕೊಹ್ಲಿ, ರವೀಂದ್ರ ಜಡೇಜಾ, ರಹಾನೆಗೆ ವಾರ್ಷಿಕ 10 ಕೋಟಿ ರೂಪಾಯಿ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...