alex Certify
ಕನ್ನಡ ದುನಿಯಾ       Mobile App
       

Kannada Duniya

ನೋ ಬಾಲ್ ಮಾಡಿ ಶತಕ ತಪ್ಪಿಸಿದ ಬೌಲರ್…!

ಪ್ರತಿಯೊಬ್ಬ ಬ್ಯಾಟ್ಸ್ ಮನ್ ತಾನು ಆಡುವ ತಂಡದ ಪರ ಶತಕ ಬಾರಿಸುವ ಆಸೆ ಹೊಂದಿರುತ್ತಾರೆ. ಅದ್ರಂತೆ ಶತಕದ ಅಂಚಿನಲ್ಲಿ ಎಡವಿದ್ರೆ, ಮಾಡಿದ ತಪ್ಪು ಸದಾ ಮನಸ್ಸಿನಲ್ಲಿ ಚುಚ್ಚುತ್ತಲೇ ಇರುತ್ತದೆ. ವಿರೋಧಿಗಳು ಶಕುನಿಯ ತಂತ್ರ ಬಳಿಸಿ, ಮೂರಂಕಿ ಮುಟ್ಟುವ ಚಾನ್ಸ್ ಮಿಸ್ ಮಾಡಿದ್ರೆ, ಕೆಂಡದಷ್ಟು ಕೋಪ ಬರುತ್ತದೆ.

ಇಂತಹ ಘಟನೆಗಳು ಕ್ರಿಕೆಟ್ ಅಂಗಳದಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ತಾಜಾ ಉದಾಹರಣೆ ಮತ್ತೊಂದು ಸಿಕ್ಕಿದೆ. ಇಂಗ್ಲೆಂಡ್ ನಲ್ಲಿ ನಡೆದ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಮೈನ್ ಹೆಡ್ ಕ್ರಿಕೆಟ್ ಕ್ಲಬ್ ವಿಜಯದ ಮಾಲೆ ತೊಡಲು ಎರಡು ರನ್ ಅವಶ್ಯಕತೆ ಇತ್ತು. ತಂಡದ ಪರ ಅಮೋಘ ಆಟವಾಡಿದ ಬ್ಯಾಟ್ಸ್ ಮನ್ ಡೇ ಡ್ಯಾರೇಲ್ ಗೂ ಶತಕದ ಸವಿಯನ್ನು ಸವಿಯಲು ಇಷ್ಟೇ ರನ್ ಅವಶ್ಯಕತೆ ಇತ್ತು.

ಪರ್ನಲ್ ಕ್ರಿಕೆಟ್ ಕ್ಲಬ್ ಬೌಲರ್, ಡ್ಯಾರೆಲ್ ರ ಶತಕ ತಪ್ಪಿಸಲು ನೋಬಾಲ್ ಮಾಡಿ, ಚೆಂಡಿಗೆ ಬೌಂಡರಿ ಗೆರೆಯ ದರ್ಶನ ಮಾಡಿಸಿದ್ರು. ಪರಿಣಾಮ ಮೈನ್ ಹೆಡ್ ಕ್ಲಬ್ ಜಯ ಸಾಧಿಸಿತು. ಬೌಲರ್ ವರ್ತನೆಗೆ ಟೀಕೆಗಳು ಕೇಳಿ ಬಂದಿದ್ದವು. ಬಳಿಕ ತಾನು ಮಾಡಿದ ತಪ್ಪಿಗೆ ಕ್ಷಮೆ ಕೋರಿದ್ದಾರೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಭಾರತೀಯ ಅಭಿಮಾನಿಗಳಿಗೆ ವೀರೇಂದ್ರ ಸೆಹ್ವಾಗ್ ನೆನಪು ಬಾರದೆ ಇರದು. ಸೆಹ್ವಾಗ್ ಶತಕ ತಪ್ಪಿಸಲು ಲಂಕಾ ಬೌಲರ್ ಸೂರಜ್ ರಣದೀಪ್ ನೋಬಾಲ್ ಮಾಡಿ, ಟೀಕೆಗೆ ಗುರಿಯಾಗಿದ್ದನ್ನು ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...