alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿಯ ಕತ್ತನ್ನೇ ಸೀಳಿಬಿಡುತ್ತಿತ್ತು ಚೂಪಾದ ಬಾಣ

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 14 ವರ್ಷದ ಆರ್ಚರ್ ಒಬ್ಬಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. ಬೆಳಗ್ಗೆ ಅಭ್ಯಾಸದ ವೇಳೆ ಚೂಪಾದ ಬಾಣ ಬಾಲಕಿಯ ಕತ್ತಿನ ಬಲಭಾಗಕ್ಕೆ ಹೊಕ್ಕಿದೆ. ಸ್ವಲ್ಪ ಆಚೀಚೆ ಆಗಿದ್ದರೂ ಬಾಲಕಿಯ ಪ್ರಾಣಕ್ಕೇ ಅಪಾಯವಾಗುತ್ತಿತ್ತು.

ಇದೊಂದು ಆಕಸ್ಮಿಕ ಘಟನೆ ಎಂದು ಹೇಳಿರುವ SAI ಪ್ರಾದೇಶಿಕ ನಿರ್ದೇಶಕ ಎಂ.ಎಸ್. ಗೊಂಯ್ಡಿ ಬಾಲಕಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಅಂತಾ ತಿಳಿಸಿದ್ದಾರೆ. ಟಾರ್ಗೆಟ್ ನಿಂದ ಕೆಲವೇ ಮೀಟರ್ ದೂರದಲ್ಲಿ ಬಾಲಕಿ ವಿಶ್ರಾಂತಿ ಪಡೆಯುತ್ತಿದ್ಲು.

ಯಾರೋ ಹೊಡೆದ ಬಾಣ ಗುರಿ ತಪ್ಪಿದೆ. ಸೀದಾ ಬಂದು ಸಮೀಪದಲ್ಲೇ ಇದ್ದ ಬಾಲಕಿಯ ಕುತ್ತಿಗೆಗೆ ಚುಚ್ಚಿಕೊಂಡಿದೆ. ಈ ಬಗ್ಗೆ ತನಿಖೆಗೂ ಆದೇಶ ನೀಡಲಾಗಿದೆ. ಎಲ್ಲಾ ಕೋಚ್ ಗಳಿಂದ್ಲೂ ವಿವರಣೆ ಪಡೆಯಲಾಗುತ್ತಿದೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಗಾಯಗೊಂಡಿರುವ ಫಜಿಲಾ, ಇಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಮುಂದಿನ ತಿಂಗಳು ನಡೆಯಲಿರುವ ಇಂಟರ್-SAI ಸ್ಪರ್ಧೆಗಾಗಿ ಆಕೆ ಅಭ್ಯಾಸ ನಡೆಸುತ್ತಿದ್ಲು. ಅವಘಡದ ಬಗ್ಗೆ ನಿರ್ದೇಶಕರು ಅವಳ ಹೆತ್ತವರ ಬಳಿಯೂ ಕ್ಷಮೆ ಕೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...