alex Certify
ಕನ್ನಡ ದುನಿಯಾ       Mobile App
       

Kannada Duniya

ನಯಾಪೈಸೆ ಹಣ ಪಡೆಯದೆ ಆಡಿದ್ದಾರೆ ಈ ಕ್ರಿಕೆಟಿಗ

ವಿದರ್ಭ ತಂಡದ ಆಟಗಾರ ವಸೀಂ ಜಾಫರ್ ಅವರನ್ನ ನೋಡಿ ಅಂತರಾಷ್ಟ್ರೀಯ ಕ್ರಿಕೆಟಿಗರು ಕಲಿಯಬೇಕಾದದ್ದು ಬಹಳಷ್ಟಿದೆ. ಹಣಕ್ಕಾಗಿ ಅಲ್ಲ, ತಂಡಕ್ಕಾಗಿ ಆಡಬೇಕು ಅನ್ನೋದನ್ನು ವಸೀಂ ಸಾಬೀತು ಮಾಡಿದ್ದಾರೆ. ಯಾಕಂದ್ರೆ ನಯಾಪೈಸೆ ಹಣ ಪಡೆಯದೇ ವಿದರ್ಭ ತಂಡದ ಪರ ಆಡಿರೋ ವಸೀಂ ಜಾಫರ್, ರಣಜಿ ಟ್ರೋಫಿಯಲ್ಲಿ ತಂಡಕ್ಕೆ ಗೆಲುವನ್ನೂ ತಂದುಕೊಟ್ಟಿದ್ದಾರೆ.

ದೆಹಲಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ವಸೀಂ 78 ರನ್ ಸಿಡಿಸಿದ್ದಾರೆ. ದೆಹಲಿಯನ್ನು 9 ವಿಕೆಟ್ ಗಳಿಂದ ಮಣಿಸಿದ ವಿದರ್ಭ ತಂಡ ರಣಜಿ ಟ್ರೋಫಿ ಗೆದ್ದುಕೊಂಡಿದೆ. ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಮತ್ತು ಇರಾನಿ ಕಪ್ ಎಲ್ಲಾ ಸರಣಿಗಳಲ್ಲೂ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ವಸೀಂ ಜಾಫರ್.

ಗಾಯದ ಸಮಸ್ಯೆಯಿಂದಾಗಿ ರಣಜಿ ಕ್ಯಾಂಪೇನ್ ನಲ್ಲಿ ವಸೀಂ ಪಾಲ್ಗೊಂಡಿರಲಿಲ್ಲ. ಜನವರಿಯಲ್ಲಿ ಫುಲ್ ಫಿಟ್ ಆಗಿದ್ದರೂ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿರಲಿಲ್ಲ. ಆದ್ರೆ ಅದಕ್ಕೆ ಕೊಂಚವೂ ಬೇಸರಿಸಿಕೊಳ್ಳದ ವಸೀಂ, ತಮ್ಮ ಬಳಿ ಎಷ್ಟಿದೆಯೋ ಅಷ್ಟರಲ್ಲೇ ಖುಷಿ ಪಡುತ್ತೇನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...