alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಸ್ ಮಾಡ್ದೇ ನೋಡಿ ಈ ಅದ್ಬುತ ‘ರನ್ ಔಟ್’…!

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ 5 ಏಕ ದಿನ ಪಂದ್ಯಗಳು ನಡೆಯುತ್ತಿದ್ದು, ಇಂಗ್ಲೆಂಡ್ ಈಗಾಗಲೇ 2-0 ಅಂತರದಿಂದ ಜಯ ಗಳಿಸಿದೆ. ಇನ್ನೊಂದು ಪಂದ್ಯದಲ್ಲಿ ಜಯ ಸಾಧಿಸಿದರೆ ಸರಣಿ ಇಂಗ್ಲೆಂಡ್ ಕೈ ವಶವಾಗುತ್ತದೆ.

ಈ ಮಧ್ಯೆ ಎರಡನೇ ಏಕ ದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬೌಲರ್ ಕ್ರಿಸ್ ವೋಕ್ಸ್, ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಅಲೆಕ್ಸ್ ಕೆರ್ರಿಯವರನ್ನು ರನ್ ಔಟ್ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

48 ನೇ ಓವರ್ ಬೌಲ್ ಮಾಡುತ್ತಿದ್ದ ಕ್ರಿಸ್ ವೋಕ್ಸ್ ಬೌಲಿಂಗ್ ನಲ್ಲಿ ಕ್ಯಾಮೆರೂನ್ ವೈಟ್ ಭಾರೀ ಹೊಡೆತಕ್ಕೆ ಯತ್ನಿಸಿದರೂ ಅದು ವಿಫಲವಾಗಿದ್ದು, ಚೆಂಡು ಸನಿಹದಲ್ಲೇ ಬಿದ್ದಿದೆ. ಆದರೂ ವೇಗವಾಗಿ ಒಂದು ರನ್ ಪಡೆಯಲು ಓಡಿದ್ದು, ಆದರೆ ಬೌಲರ್ ಕ್ರಿಸ್ ವೋಕ್ಸ್ ಕೂಡಲೇ ಧಾವಿಸಿ ತಮ್ಮ ಕಾಲಿನಿಂದಲೇ ವಿಕೆಟ್ ಕಡೆಗೆ ಚೆಂಡನ್ನು ಒದ್ದಿದ್ದಾರೆ. ಹೀಗಾಗಿ ಬೌಲರ್ ತುದಿಯಿಂದ ರನ್ ಗಾಗಿ ಓಡುತ್ತಿದ್ದ ಅಲೆಕ್ಸ್ ಕೆರ್ರಿ ಸುಲಭವಾಗಿ ಔಟಾಗಿದ್ದಾರೆ.

Woakes' fancy footwork catches Carey short

Nice little cross here from Chris Woakes to put an end to Alex Carey's cameo! ⚽

Posted by Cricket Network on Thursday, January 18, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...