alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಿ’ ಗೆ ಬ್ಯಾಟ್ ಗಿಫ್ಟ್ ನೀಡಿದ ಕ್ರಿಸ್ ಗೇಯ್ಲ್

gayle_bat-e1456566398327

ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಬಾಲಿವುಡ್ ಚಿತ್ರರಂಗದ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಅವರಿಗೆ ತಮ್ಮ ಹಸ್ತಾಕ್ಷರವುಳ್ಳ ಬ್ಯಾಟ್ ಅನ್ನು ಕಾಣಿಕೆಯಾಗಿ ನೀಡಿದ್ದಾರೆ. ಜೊತೆಗೆ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿರುವ ಕ್ರಿಸ್ ಗೇಯ್ಲ್, Proud to gift my Spartan bat to a legend @srbachchan, love his movies & his style, legend. Thanks @spartancricket ಎಂದು ಹೇಳಿದ್ದಾರೆ.

ತಮಗೆ ದೊರೆತ ಈ ಅತ್ಯಮೂಲ್ಯವಾದ ಗಿಫ್ಟ್ ನಿಂದ ಸಂತಸಗೊಂಡಿರುವ ಅಮಿತಾಭ್ ಬಚ್ಚನ್, “Mr. Chris Gayle… What an honour… I never knew you would know me… So humbled. We are all great fans of yours! I mean Chris Gayle, a fan of Hindi movies and presents me a golden bat autographed? I mean this is revelation” ಎಂದು ಟ್ವೀಟ್ ಮಾಡಿದ್ದಾರೆ.

ಕ್ರಿಸ್ ಗೇಯ್ಲ್ ಇಂಡಿಯನ್ ಪ್ರಿಮಿಯರ್ ಲೀಗ್ ತಂಡದ ಆಟಗಾರರೂ ಆಗಿದ್ದು, ಶೀಘ್ರದಲ್ಲೇ ಭಾರತದಲ್ಲಿ ಬಚ್ಚನ್ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ನ ದೊಡ್ಡ ಅಭಿಮಾನಿಯಾಗಿರುವ ಅಮಿತಾಭ್ ಬಚ್ಚನ್ ಸಹ ಈ ಭೇಟಿಗೆ ಉತ್ಸುಕರಾಗಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...