alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಹಾಲಿ ಅಂಗಳದಲ್ಲಿ ಅಬ್ಬರಿಸಿದ ಗೇಲ್

ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್, ಮೊಹಾಲಿಯ ಅಂಗಳದಲ್ಲಿ ಸ್ಪೋಟಿಸಿದ್ದಾರೆ. ಗೇಲ್ ಹನ್ನೊಂದನೆ ಆವೃತ್ತಿಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಅಬ್ನರಿಸಿದ್ದಾರೆ. ಈ ಮೂಲಕ ಗೇಲ್ ಪ್ರಸಕ್ತ ಐಪಿಎಲ್ ನಲ್ಲಿ ಮೊದಲ ಶತಕ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮೊಹಾಲಿಯ ಅಂಗಳದಲ್ಲಿ ಮನಸೋಇಚ್ಛೆ ಬ್ಯಾಟ್ ಮಾಡಿದ ಜಮೈಕಾದ ದೈತ್ಯ ಆಟಗಾರ ರನ್ ಗಳನ್ನು ಕೊಳ್ಳೆ ಹೊಡೆದ್ರು. ಈ ಋತುವಿನಲ್ಲಿ ಗೇಲ್ ರನ್ನು ಕೊಳ್ಳಲು ಹಿಂದೇಟು ಹಾಕಿದ ಮಾಲೀಕರು ಕೈ ಕೈ ಹಿಸುಕಿಕೊಳ್ಳುವಂತಹ ಇನ್ನಿಂಗ್ಸ್ ಕಟ್ಟಿದ್ರು. ಇದು ಗೇಲ್ ಐಪಿಎಲ್ ನಲ್ಲಿ ಬಾರಿಸಿದ 6ನೇ ಶತಕವಾಗಿದೆ.

ಐಪಿಎಲ್ ನ ಕ್ಲಾಸ್ ಬೌಲರ್‌ಗಳಲ್ಲಿ ಒಬ್ಬರಾದ ರಶೀದ್ ಖಾನ್ ಸಹ ಗೇಲ್ ರನ್ನು ಕಟ್ಟಿ ಹಾಕುವಲ್ಲಿ ವಿಫಲರಾದ್ರು. ಅಲ್ಲದೇ ಸಾಕಷ್ಟು ರನ್ ನೀಡಿ ಕೈ ಸುಟ್ಟು ಕೊಂಡರು.  ಗೇಲ್​ 63 ಎಸೆತಗಳಲ್ಲಿ ಸ್ಪೋಟಕ 104 ರನ್​ ಬಾರಿಸಿ ಅಬ್ಬರಿಸಿದ್ದಾರೆ. ಇದ್ರಲ್ಲಿ 11 ಸಿಕ್ಸರ್​ ಹಾಗೂ 1 ಬೌಂಡರಿ ಸೇರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...