alex Certify
ಕನ್ನಡ ದುನಿಯಾ       Mobile App
       

Kannada Duniya

ಗೇಲಿಗೆ ಗುರಿಯಾಗಿದೆ ಮೈದಾನದಲ್ಲಿನ ನೇಮರ್ ವರ್ತನೆ

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬ್ರೆಜಿಲ್ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ 2-0 ಯಿಂದ ಮೆಕ್ಸಿಕೊ ವಿರುದ್ಧ ಜಯ ಸಾಧಿಸಿತು. ಇನ್ನು ಮಹತ್ವದ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ತಂಡದ ಪ್ರದರ್ಶನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಅಂತೆಯೇ, ಸಾಂಬಾ ನಾಡಿನ ಸ್ಟಾರ್ ಪ್ಲೇಯರ್ ನೇಮರ್, ಗಾಯವಾದಂತೆ ಮಾಡುವ ಅತಿರೇಕದ ವರ್ತನೆಗೆ ಅಭಿಮಾನಿಗಳು ಕಿಡಿ ಕಾರಿದ್ದಾರೆ. ನೇಮರ್ ರೀತಿಯ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡ್ತಾ ಇದೆ.

ಫುಟ್ಬಾಲ್ ಆಡುವ ಚಿನ್ನರೆಲ್ಲರು, ಚೆಂಡಿನೊಂದಿಗೆ ನಿಂತಿರುತ್ತಾರೆ. ಆಟ ಆರಂಭವಾಗುತ್ತಿದ್ದಂತೆ, ಚೆಂಡನ್ನು ಮುಂದೆ ತಳ್ಳುತ್ತಾ ಬಂದ ಮಕ್ಕಳು, ಮಧ್ಯದಲ್ಲಿ ಬಿದ್ದು ಬಿಡುತ್ತಾರೆ. ಆಗ ಸ್ಥಳದಲ್ಲಿದ್ದ ಮಕ್ಕಳ ಕೋಚ್ ನೇಮರ್ ಔಟ್….ಎಂದು ಹೇಳುತ್ತಾನೆ. ಬರೀ ಈ ಚಿಣ್ಣರಷ್ಟೇ ಅಲ್ಲ ಇನ್ನು ಹಲವು ಅಭಿಮಾನಿಗಳು ನಾನಾ ರೀತಿಯ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...