alex Certify
ಕನ್ನಡ ದುನಿಯಾ       Mobile App
       

Kannada Duniya

ಚೆನ್ನೈ ಸೂಪರ್ ಕಿಂಗ್ಸ್ ‘ಮದುವೆ ಆಮಂತ್ರಣ’ ಫುಲ್ ವೈರಲ್

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ, ಸಖತ್ ಫ್ಯಾನ್ ಫಾಲೋವರ್ಸ್ ಇದ್ದಾರೆ. ಧೋನಿಯನ್ನು ತಮಿಳುನಾಡಿನ ಜನ ಎಲ್ಲರಿಗಿಂತಲೂ ಹೆಚ್ಚು ಪ್ರೀತಿಸ್ತಾರೆ.

ಮಾಹಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ನಲ್ಲಿ ಬ್ಯಾಟ್ ಬೀಸ್ತಾರೆ. ಈ ತಂಡಕ್ಕೆ ಬೇರೆ ಎಲ್ಲ ತಂಡಗಳಿಗಿಂತಲೂ ಹೆಚ್ಚಿನ ಫ್ಯಾನ್ ಫಾಲೋವರ್ಸ್ ಇರೋದು ಗೊತ್ತಿರೋ ವಿಚಾರ. ಎರಡು ವರ್ಷದ ನಿಷೇಧದ ಬಳಿಕ ಧೋನಿ ಸೈನ್ಯ 11ನೇ ಆವೃತ್ತಿ ಐಪಿಎಲ್ ನಲ್ಲಿ ಮೈದಾನ ಪ್ರವೇಶಿಸಿ ಕಮಾಲ್ ಮಾಡಿತ್ತು.

2018ರ ಐಪಿಎಲ್ ಪಂದ್ಯಗಳು ರಾಜಕೀಯ ಕಾರಣಗಳಿಂದ ಚೆನ್ನೈನಿಂದ ಪುಣೆ ಗೆ ಶಿಫ್ಟ್ ಆದವು. ಧೋನಿ ಬ್ರಿಗೇಡ್ ಈ ಬಾರಿ ಐಪಿಎಲ್ ನಲ್ಲಿ ತನ್ನ ಛಾಪು ಮೂಡಿಸಿದೆ. ಇದಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿ ವಿಭಿನ್ನವಾಗಿ ಮದುವೆ ಆಮಂತ್ರಣ ರೆಡಿ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.

ಧೋನಿ ಹಳದಿ ಬಣ್ಣದ ಉಡುಗೆಯಲ್ಲಿ ಕಪ್ ಎತ್ತಿರೋ ಫೋಟೋವನ್ನು ಕವರ್ ಪೇಜ್ ನಲ್ಲಿ ಹಾಕಲಾಗಿದೆ. ಚೆನ್ನೈ ಸೂಪರ್ ಕಿಂಗ್ ಕೆ.ವಿನೋದ್ vs ಚೆನ್ನೈ ಸೂಪರ್ ಕ್ವೀನ್ ಜಿ.ಎನ್. ಸಾಧಾನ ಎಂದು ಬರೆಯಲಾಗಿದೆ. ಪಕ್ಕಾ ಕ್ರಿಕೆಟ್ ಶೈಲಿಯಲ್ಲಿ ಮುದ್ರಿತವಾಗಿರುವ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆದಿದೆ. ಈ ಪತ್ರಿಕೆಯನ್ನು ಚೆನ್ನೈ ಸೂಪರ್ ಕಿಂಗ್ಸ್, ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಅಲ್ಲದೆ ವಧು, ವರರಿಗೆ ಶುಭಾಶಯ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...