alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಕ್ಸರ್ ಬಾರಿಸಿದ ಧೋನಿ, ಕೊಹ್ಲಿ ಪಡೆಗೆ ಸೋಲು

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಅಂತರದ ಗೆಲುವು ಕಂಡಿದೆ.

ಚೆನ್ನೈ ಪರ ಅಂಬಟಿ ರಾಯುಡು(82), ಎಂ.ಎಸ್. ಧೋನಿ ಅಜೇಯ 70 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಆರ್.ಸಿ.ಬಿ. ಪರವಾಗಿ ಎಬಿ ಡಿ’ವಿಲಿಯರ್ಸ್(68), ಕ್ವಿಂಟನ್ ಡಿ ಕಾಕ್(53) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರಾದರೂ, ಅವರ ಹೋರಾಟ ವ್ಯರ್ಥವಾಯ್ತು.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ. ಪರವಾಗಿ ಕ್ವಿಂಟನ್ ಡಿ ಕಾಕ್ 53, ವಿರಾಟ್ ಕೊಹ್ಲಿ 18, ಎಬಿ ಡಿ’ವಿಲಿಯರ್ಸ್ 68, ಮನ್ ದೀಪ್ ಸಿಂಗ್ 32 ರನ್ ಗಳಿಸಿದರು. ಆರ್.ಸಿ.ಬಿ. ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಬೃಹತ್ ಮೊತ್ತ ಕಲೆ ಹಾಕಿತು. ಚೆನ್ನೈ ಪರವಾಗಿ ಶಾರ್ದೂಲ್ ಠಾಕೂರ್ 2, ಇಮ್ರಾನ್ ತಾಹಿರ್ 2, ಡ್ವೇನ್ ಬ್ರಾವೊ 2 ವಿಕೆಟ್ ಪಡೆದರು.

206 ರನ್ ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಅಂಬಟಿ ರಾಯುಡು 82, ಎಂ.ಎಸ್. ಧೋನಿ ಅಜೇಯ 70, ಡ್ವೇನ್ ಬ್ರಾವೊ ಅಜೇಯ 14 ರನ್ ಗಳಿಸಿದರು. ಬೃಹತ್ ಮೊತ್ತ ಬೆನ್ನತ್ತಿದ್ದ ಚೆನ್ನೈ ಕೊನೆಯ ಓವರ್ ನಲ್ಲಿ 16 ರನ್ ಗಳಿಸಬೇಕಿತ್ತು. ಗ್ರೇಟ್ ಫಿನಿಶರ್ ಧೋನಿ ಸಿಕ್ಸರ್ ಬಾರಿಸುವ ಮೂಲಕ ಮತ್ತೆ ಮಿಂಚಿದರು. 19.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿದ ಚೆನ್ನೈ ಗೆಲುವಿನ ನಗೆ ಬೀರಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...