alex Certify
ಕನ್ನಡ ದುನಿಯಾ       Mobile App
       

Kannada Duniya

ಅಭ್ಯಾಸದ ವೇಳೆಯೇ ಹಾರಿಹೋಯ್ತು ಆಟಗಾರನ ಪ್ರಾಣ

foot-bald-d

ಬೀಜಿಂಗ್: ಚೀನಾದಲ್ಲಿ ಅಭ್ಯಾಸದ ವೇಳೆಯೇ ಕುಸಿದು ಬಿದ್ದು ಫುಟ್ ಬಾಲ್ ಆಟಗಾರರೊಬ್ಬರು ಮೃತಪಟ್ಟಿದ್ದಾರೆ.

ಐವರಿ ಕೋಸ್ಟ್ ಫುಟ್ ಬಾಲ್ ತಂಡದ ಮಾಜಿ ಆಟಗಾರ ಚೆಕ್ ಟಿಯೋಟೆ ಪ್ರಸ್ತುತ ಚೀನಾದ ಬೀಜಿಂಗ್ ಎಂಟರ್ ಪ್ರೈಸಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಚೀನಾದಲ್ಲಿ ತರಬೇತಿ ವೇಳೆ ಅವರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಐವರಿ ಕೋಸ್ಟ್ ಫುಟ್ ಬಾಲ್ ತಂಡದ ಮಾಜಿ ಮಿಡ್ಲ್ ಫೀಲ್ಡರ್ ಆಗಿದ್ದ ಚೆಕ್ ಟಿಯೋಟೆಗೆ 30 ವರ್ಷ ವಯಸ್ಸಾಗಿದ್ದು, 11 ಪಂದ್ಯಗಳಲ್ಲಿ ಬೀಜಿಂಗ್ ತಂಡವನ್ನು ಅವರು ಪ್ರತಿನಿಧಿಸಿದ್ದರು.

2010 ರಿಂದ 2017 ರ ವರೆಗೆ ನ್ಯೂಕ್ ಸ್ಟಾಲ್ ಯುನೈಟೆಡ್ ತಂಡದಲ್ಲಿ ಆಡಿದ್ದ ಅವರು, ಐವರಿ ಕೋಸ್ಟ್ ರಾಷ್ಟ್ರೀಯ ತಂಡದಲ್ಲಿ 52 ಪಂದ್ಯಗಳನ್ನಾಡಿದ್ದರು.

ಚೀನಾದಲ್ಲಿ ಬೀಜಿಂಗ್ ಎಂಟರ್ ಪ್ರೈಸಸ್ ತಂಡದ ಪರವಾಗಿ ತರಬೇತಿ ಪಡೆಯುವ ವೇಳೆಯೇ ಅವರು ಮೃತಪಟ್ಟಿದ್ದಾರೆ ಎಂದು ಅವರ ಏಜೆಂಟ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...