alex Certify
ಕನ್ನಡ ದುನಿಯಾ       Mobile App
       

Kannada Duniya

”ಮಿಸ್ಟರ್ ಕೊಹ್ಲಿ, ಪಾಕಿಸ್ತಾನವನ್ನು ನೋಡಿ ಕಲಿಯಿರಿ”

vinod-kambli

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯವನ್ನು ಗೆದ್ದು ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಭಾರತ ತಂಡಕ್ಕೆ ಶ್ರೀಲಂಕಾ ಶಾಕ್ ಕೊಟ್ಟಿದೆ. ಬೌಲರ್ ಗಳ ನೀರಸ ಪ್ರದರ್ಶನದಿಂದಾಗಿ ಟೀಂ ಇಂಡಿಯಾ, ಲಂಕಾ ವಿರುದ್ಧ ಸೋಲು ಅನುಭವಿಸಿದೆ.

ಈ ಸೋಲಿನಿಂದ ಟೀಂ ಇಂಡಿಯಾ ಅಭಿಮಾನಿಗಳಿಗೆ ನಿರಾಸೆಯಾಗಿರೋದು ಸುಳ್ಳಲ್ಲ. ಮಾಜಿ ಕ್ರಿಕೆಟಿಗರು ಕೂಡ ಕೊಹ್ಲಿ ಪಡೆಯ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ಕ್ರಿಕಟಿಗ ವಿನೋದ್ ಕಾಂಬ್ಳಿ ಅವರಂತೂ ವಿರಾಟ್ ಕೊಹ್ಲಿಗೆ ಪಾಕಿಸ್ತಾನದಿಂದ ಪಾಠ ಕಲಿಯುವಂತೆ ಕಿವಿಮಾತು ಹೇಳಿದ್ದಾರೆ.

‘ಮಿಸ್ಟರ್ ಕೊಹ್ಲಿ, ಸರಿಯಾದ ಯೋಜನೆಯೇ ಇಲ್ಲದೆ ಆಟವಾಡ್ತಿದ್ದೀರಾ. ಪಾಕಿಸ್ತಾನವನ್ನು ನೋಡಿ, ಅದ್ಭುತ ಪ್ಲಾನಿಂಗ್ ಮೂಲಕ, ನಂಬರ್ ವನ್ ತಂಡವಾಗಿರೋ ದಕ್ಷಿಣ ಆಫ್ರಿಕಾವನ್ನೇ ಬಗ್ಗು ಬಡಿದಿದೆ’’ ಅಂತಾ ಕಾಂಬ್ಳಿ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾವನ್ನು ಕೇವಲ 219 ರನ್ ಗಳಿಗೆ ಕಟ್ಟಿಹಾಕಿದ್ದ ಪಾಕಿಸ್ತಾನ, ಡಕ್ ವರ್ತ್ ಲೂಯಿಸ್ ನಿಯಮದ ಅಡಿಯಲ್ಲಿ 19 ರನ್ ಗಳ ಗೆಲುವು ದಾಖಲಿಸಿತ್ತು. ಸೆಮಿಫೈನಲ್ ಪ್ರವೇಶಿಸಬೇಕಂದ್ರೆ ಭಾರತ ಜೂನ್ 11ರಂದು ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಲೇಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...