alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ತಂಡಕ್ಕೆ ಶುಭಕೋರಿ ಕೆಂಗಣ್ಣಿಗೆ ಗುರಿಯಾದ ಆಟಗಾರ್ತಿ

sania

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಹೀನಾಯ ಸೋಲುಂಡಿದೆ. ಪಾಕಿಸ್ತಾನ ಟ್ರೋಫಿ ಎತ್ತಿ ಹಿಡಿಯುತ್ತಿದ್ದರೆ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾನಿಯಾ ಮಿರ್ಜಾ ಟ್ವೀಟ್ ಗೆ ಭಾರತೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ವಾಸ್ತವವಾಗಿ ಪಾಕಿಸ್ತಾನ ಗೆಲುವು ಸಾಧಿಸ್ತಾ ಇದ್ದಂತೆ ಸಾನಿಯಾ ಮಿರ್ಜಾ ಟ್ವೀಟರ್ ಅಕೌಂಟ್ ನಲ್ಲಿ ಸಂದೇಶ ರವಾನೆ ಮಾಡಿದ್ದಾರೆ. ಯಾವುದೇ ವಿವಾದ ಸೃಷ್ಟಿಯಾಗದಂತೆ ಸಾನಿಯಾ ಟ್ವಿಟ್ ಮಾಡಿದ್ದಾರೆ. ಕ್ರಿಕೆಟ್ ನಲ್ಲಿ ಸೋತ್ವಿ ಆದ್ರೆ ಹಾಕಿಯಲ್ಲಿ ಗೆಲುವು ನಮ್ಮದಾಯ್ತು. ಭಾರತದ ಹಾಕಿ ತಂಡಕ್ಕೆ ಅಭಿನಂದನೆ. ಗೆಲುವಿಗಾಗಿ ಪಾಕಿಸ್ತಾನ ತಂಡಕ್ಕೆ ಶುಭಕೋರುತ್ತೇನೆ ಎಂದು ಸಾನಿಯಾ ಟ್ವಿಟ್ ಮಾಡಿದ್ದಾರೆ.

ಸಾನಿಯಾ ಮಿರ್ಜಾ ಟ್ವಿಟ್ ಮಾಡ್ತಾ ಇದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾನಿಯಾ ವಿರುದ್ಧ ಕಿಡಿಕಾರಿದ್ದಾರೆ. 16234 ಜನ ಸಾನಿಯಾ ಟ್ವಿಟ್ ಲೈಕ್ ಮಾಡಿದ್ದಾರೆ. 3 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...