alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಬ್ಳೆ ಬರುತ್ತಲೇ ನೆಟ್ಸ್ ನಿಂದ ಹೊರ ನಡೆದ ಕೊಹ್ಲಿ

Bengaluru : Captain Virat Kohli and Head Coach Anil Kumble arrive to address a press conference on the last day of the preparatory camp ahead of West Indies tour, in Bengaluru on Monday. PTI Photo by Shailendra Bhojak (PTI7_4_2016_000124A) *** Local Caption ***

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವಣ ವಿರಸ ಇನ್ನೂ ಬಗೆಹರಿದಂತಿಲ್ಲ. ನಿನ್ನೆಯಷ್ಟೆ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಹಾಗೂ ಜನರಲ್ ಮ್ಯಾನೇಜರ್ ಎಂ.ವಿ.ಶ್ರೀಧರ್, ತಂಡದ ಸದಸ್ಯರ ಜೊತೆಗೆ ಸಭೆ ನಡೆಸಿದ್ರು. ಆದ್ರೆ ಸಭೆ ಸಫಲವಾಗಿದ್ಯಾ ಅನ್ನೋದು ಇನ್ನೂ ಬಹಿರಂಗವಾಗಿಲ್ಲ.

ಇನ್ನೊಂದೆಡೆ ಕೊಹ್ಲಿ ಹಾಗೂ ಕುಂಬ್ಳೆ ನಡುವಣ ಭಿನ್ನಾಭಿಪ್ರಾಯಕ್ಕೆ ತೇಪೆ ಹಚ್ಚಲು ಬಿಸಿಸಿಐ ಮೂವರನ್ನು ಇಂಗ್ಲೆಂಡ್ ಗೆ ಕಳಿಸಿಕೊಟ್ಟಿದೆ. ಆದ್ರೆ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಕೊಹ್ಲಿ ಹಾಗೂ ಕುಂಬ್ಳೆ ಮಧ್ಯೆ ಶೀತಲ ಸಮರ ಮುಂದುವರಿದಿತ್ತು ಎನ್ನಲಾಗ್ತಿದೆ.

ಇನ್ನೊಂದೆಡೆ ಅನಿಲ್ ಕುಂಬ್ಳೆಯೊಟ್ಟಿಗೆ ನೆಟ್ಸ್ ನಲ್ಲಿ ಅಭ್ಯಾಸ ಮಾಡಲು ಕೂಡ ಕೊಹ್ಲಿ ಬರ್ತಾ ಇಲ್ಲ. ನಿನ್ನೆ ಬ್ಯಾಟ್, ಪ್ಯಾಡ್, ಬಾಲ್ ಜೊತೆಗೆ ಅನಿಲ್ ಕುಂಬ್ಳೆ, ಆಟಗಾರರ ಅಭ್ಯಾಸಕ್ಕಾಗಿ ಮೈದಾನಕ್ಕಿಳಿದ್ರು. ಕುಂಬ್ಳೆ ಬಂದಿದ್ದೇ ತಡ ಕೊಹ್ಲಿ ನೆಟ್ಸ್ ನಿಂದ ಹೊರನಡೆದಿದ್ದಾರೆ.

ಈಗಾಗ್ಲೇ ಕೋಚ್ ಹುದ್ದೆಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಚಾಂಪಿಯನ್ಸ್ ಟ್ರೋಫಿ ನಂತರ ಕುಂಬ್ಳೆ ಹುದ್ದೆಯಿಂದ ಕೆಳಗಿಳಿಯುವುದು ಖಚಿತವಾಗಿದೆ. ಕೋಚ್ ಹುದ್ದೆಗಾಗಿ ವೀರೇಂದ್ರ ಸೆಹ್ವಾಗ್ ಕೂಡ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...