alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರದಲ್ಲೇ ಬಹಿರಂಗವಾಗುತ್ತೆ ಮೋದಿಯವರ ಈ ವಿಡಿಯೋ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಡ್ಡಿದ್ದ ಸವಾಲಿಗೆ ಪ್ರಧಾನಿ ನರೇಂದ್ರ ಮೋದಿ, ಶೀಘ್ರದಲ್ಲೇ ವಿಡಿಯೋ ಮೂಲಕ ಉತ್ತರ ನೀಡಲಿದ್ದಾರೆ.

ಅಂದಹಾಗೆ ಮೋದಿ ಅವರಿಗೆ ವಿರಾಟ್ ಕೊಹ್ಲಿ ಒಡ್ಡಿದ ಸವಾಲು ಯಾವುದು ಗೊತ್ತಾ…? ಅದುವೇ ಫಿಟ್ನೆಸ್ ಚಾಲೆಂಜ್. ತಮ್ಮ ಫಿಟ್ನೆಸ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ವಿರಾಟ್ ಕೊಹ್ಲಿ, ತಮ್ಮ ಪತ್ನಿ ಅನುಷ್ಕಾ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹೇಂದ್ರ ಸಿಂಗ್ ಧೋನಿಯವರು ಇದನ್ನು ಒಪ್ಪಿಕೊಳ್ಳುವಂತೆ ಚಾಲೆಂಜ್ ಮಾಡಿದ್ದರು.

ವಿರಾಟ್ ಕೊಹ್ಲಿ ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿಯವರು, ಸವಾಲನ್ನು ಸ್ವೀಕರಿಸಿದ್ದೇನೆ ಶೀಘ್ರದಲ್ಲೇ ಫಿಟ್ನೆಸ್ ವಿಡಿಯೋವನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್ ಮೊದಲಿಗೆ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂಬ ಚಾಲೆಂಜ್ ಆರಂಭಿಸಿದ್ದು, ಪುಶ್ ಅಪ್ ಮಾಡುವ ತಮ್ಮ ವಿಡಿಯೋವನ್ನು ಪೋಸ್ಟ್ ಮಾಡಿದ್ದರಲ್ಲದೆ ವಿರಾಟ್ ಕೊಹ್ಲಿ, ಸೈನಾ ನೆಹ್ವಾಲ್ ಹಾಗೂ ಹೃತಿಕ್ ರೋಷನ್ ಗೆ ಸವಾಲೊಡ್ಡಿದ್ದರು. ಈ ಅಭಿಯಾನಕ್ಕೆ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್ ವಿಡಿಯೋವನ್ನು ಶೇರ್ ಮಾಡುವ ಮೂಲಕ ಪ್ರಚಾರ ನೀಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...