alex Certify
ಕನ್ನಡ ದುನಿಯಾ       Mobile App
       

Kannada Duniya

ಮಸ್ತ್ ಮಜಾ ಮಾಡಿದ ‘ಚಕ್ ದೇ ಇಂಡಿಯಾ’ ಗರ್ಲ್ಸ್

chak de india girlsಅಪರೂಪಕ್ಕೆ ಹಳೆ ಗೆಳೆಯರು ಸಿಕ್ಕಾಗ ಅದರ ಸಂಭ್ರಮವೇ ಬೇರೆ. ಎಲ್ಲರೂ ಅವರವರ ಕಾರ್ಯಗಳಲ್ಲೇ ಬ್ಯುಸಿಯಾಗಿರುವ ಸಂದರ್ಭದಲ್ಲಿ ಬಹು ಕಾಲದ ಬಳಿಕ ಗೆಳೆಯರು ಸಿಕ್ಕಾಗ ಹಳೆಯ ಸಿಹಿ ನೆನಪುಗಳು ಮರುಕಳಿಸಿ ಉಲ್ಲಾಸ ಉಂಟಾಗುತ್ತದೆ. ಅಂತದ್ದೇ ಘಟನೆಗೆ ಸಾಕ್ಷಿಯಾಗಿದ್ದಾರೆ ‘ಚಕ್ ದೇ ಇಂಡಿಯಾ’ ಗರ್ಲ್ಸ್.

ಹೌದು. ಶಾರೂಕ್ ನಟನೆಯ ಸೂಪರ್ ಹಿಟ್ ಚಿತ್ರ ‘ಚಕ್ ದೇ ಇಂಡಿಯಾ’ ಬಿಡುಗಡೆಯಾಗಿ ಈಗಾಗಲೇ 10 ವರ್ಷ ಸಂದಿದೆ. ಈ ಚಿತ್ರದಲ್ಲಿ ಭಾರತ ಮಹಿಳಾ ಹಾಕಿ ತಂಡದ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಯುವತಿಯರು ಇಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರೆಲ್ಲರೂ ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೇ ಒಂದುಗೂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಅಂದು ಇವರುಗಳ ಜೊತೆ ‘ಚಕ್ ದೇ ಇಂಡಿಯಾ’ ಚಿತ್ರದಲ್ಲಿ ನಟಿಸಿದ್ದ ಶುಭಿ ಮೆಹ್ತಾ ವಿವಾಹ ಸಮಾರಂಭ. ಇದರಲ್ಲಿ ಪಾಲ್ಗೊಂಡಿದ್ದ ‘ಚಕ್ ದೇ ಇಂಡಿಯಾ’ ಗರ್ಲ್ಸ್ ಮಸ್ತ್ ಮಜಾ ಮಾಡಿದ್ದಾರೆ. ಚಿತ್ರೀಕರಣದಲ್ಲಿನ ತಮ್ಮ ಸವಿನೆನಪುಗಳನ್ನು ಹಂಚಿಕೊಂಡ ಇವರುಗಳು ತಾವುಗಳೆಲ್ಲರೂ ಒಟ್ಟಿಗಿದ್ದ ಚಿತ್ರಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ.

capture_1

chak-de-india-girls-at-vidya-malvades-house-in-gurgaon

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...