alex Certify
ಕನ್ನಡ ದುನಿಯಾ       Mobile App
       

Kannada Duniya

ವಿದಾಯದ ಪಂದ್ಯದಲ್ಲಿ ಅಪರೂಪದ ದಾಖಲೆ ಮಾಡಿದ ಕ್ರಿಕೆಟರ್

ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಅಲಿಸ್ಟಾರ್ ಕುಕ್ ತಮ್ಮ ವೃತ್ತಿ ಜೀವನದ ಕೊನೆಯ ಇನ್ನಿಂಗ್ಸ್ ನಲ್ಲಿ ಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ ವಿದಾಯದ ಪಂದ್ಯವನ್ನು ಕುಕ್ ಅವಿಸ್ಮರಣೀಯವಾಗಿಸಿದ್ದು, ದಾಖಲೆಯ ಪುಟ ಸೇರಿದ್ದಾರೆ.

ಓವಲ್ ಅಂಗಳದಲ್ಲಿ ನಿನ್ನೆ ನಡೆದ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ, ಕುಕ್ ಮೂರಂಕಿಯ ಸಾಧನೆ ಮಾಡಿದ್ದಾರೆ. ಟೀಮ್ ಇಂಡಿಯಾದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕುಕ್, ಅಬ್ಬರಿಸಿದ್ರು.

ತಮ್ಮ ನೈಜ ಆಟ ಆಡಿದ ಅಲಿಸ್ಟಾರ್ ಕುಕ್, ಆರ್ಭಟಿಸಿದ್ರು. ಸರಣಿಯಲ್ಲಿ ರನ್ ಕಲೆ ಹಾಕಲು ವಿಫಲರಾಗಿದ್ದ ಕುಕ್, ತಮ್ಮ ನ್ಯೂನ್ಯತೆಗಳನ್ನು ಮೆಟ್ಟಿ ನಿಂತರು. ಕೊಹ್ಲಿ ಪಡೆ ಹಾಕಿಕೊಂಡ ರಣತಂತ್ರವನ್ನು ಬುಡಮೇಲು ಮಾಡಿದ ಕುಕ್, ತಮ್ಮ ಕೊನೆಯ ಇನ್ನಿಂಗ್ಸ್ ನಲ್ಲಿ ಶತಕ ದಾಖಲಿಸಿದ್ರು. ಈ ಮೂಲಕ ಟೆಸ್ಟ್ ನಲ್ಲಿ 33ನೇ ಬಾರಿ ಮೂರಂಕಿ ಮುಟ್ಟಿದ ಹೆಗ್ಗಳಿಕೆ ಕುಕ್ ಅವರದ್ದಾಯಿತು.

ಕುಕ್, ತಮ್ಮ ಕೊನೆಯ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿ ದಾಖಲೆಯ ಪುಟ ಸೇರಿದ್ರು. ಹೌದು….ಕುಕ್, ತಾವಾಡಿದ ಮೊದಲ ಟೆಸ್ಟ್ ಹಾಗೂ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ರು. ಅಲ್ಲದೆ ಫಸ್ಟ್ ಇನ್ನಿಂಗ್ಸ್ ಹಾಗೂ ಲಾಸ್ಟ್ ಇನ್ನಿಂಗ್ಸ್ ನಲ್ಲಿ ಶತಕದ ಸಾಧನೆ ಮಾಡಿದ ವಿಶ್ವದ 5ನೇ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...