alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಗ್ ಜಿನ್ ಗಾಗಿ ಬೆತ್ತಲಾದ ಟೆನಿಸ್ ತಾರೆ

bodypaint

ಕೆಲವರಿಗೆ ತಮ್ಮ ಹೆಸರು ಯಾವಾಗಲೂ ಮಿಂಚಬೇಕೆಂಬ ಆಸೆ ಇರುತ್ತದೆ. ಇದಕ್ಕಾಗಿ ಏನಾದರೂ ಮಾಡಲು ತಯಾರಿರುತ್ತಾರೆ. ಹೀಗೆ ಹೆಸರಿನ ಕಾರಣಕ್ಕೆ ಹಲವಾರು ಮಂದಿ ವಿಭಿನ್ನ ಪ್ರಯತ್ನಗಳನ್ನು ಮಾಡಿರುವುದನ್ನು ನೋಡಿರುತ್ತೀರಿ.

ಖ್ಯಾತ ಟೆನಿಸ್ ಆಟಗಾರ್ತಿಯೊಬ್ಬರು ಮ್ಯಾಗ್ ಜಿನ್ ಒಂದಕ್ಕೆ ಬೆತ್ತಲೆ ಪೋಸ್ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಡೆನ್ಮಾರ್ಕ್ ಟೆನಿಸ್ ತಾರೆ ಕ್ಯಾರೊಲಿನ್ ವೋಜ್ನಿಯಾಕಿ ಪ್ರಸಕ್ತ ವರ್ಷದ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಮ್ಯಾಗ್ ಜಿನ್ ಹೊರತಂದಿರುವ ಸ್ವಿಮ್ ಸೂಟ್ ವಿಶೇಷ ಸಂಚಿಕೆಗೆ ಬಿಕಿನಿ ರೂಪದಲ್ಲಿ ಬಾಡಿಪೇಂಟಿಂಗ್ ಮಾಡಿಕೊಂಡು ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಪಡ್ಡೆಹೈಕಳು ದಂಗಾಗುವಂತೆ ಮಾಡಿದ್ದಾರೆ. ಕ್ಯಾರೊಲಿನ್ ವೋಜ್ನಿಯಾಕಿ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಇದೊಂದು ವಿಶೇಷ ಅನುಭವ. ದೇಹಕ್ಕೆ ಹಚ್ಚಿದ್ದ ಬಣ್ಣದ ವಿನ್ಯಾಸ ಸಖತ್ ಆಗಿತ್ತು ಎಂದು ಹೇಳಿದ್ದಾರೆ.

ಟೆನಿಸ್ ನಲ್ಲಿ ಮಿಂಚು ಹರಿಸಿದಂತೆ ಕ್ಯಾರೊಲಿನ್ ವೋಜ್ನಿಯಾಕಿ ಈ ವಿಶೇಷಾಂಕದಲ್ಲೂ ಮಿಂಚು ಹರಿಸಿದ್ದಾರೆ. ಇದರಲ್ಲಿ ಇವರು ಮಾತ್ರವಲ್ಲ, ಇನ್ನೂ ಕೆಲವು ಕ್ರೀಡಾ ಕ್ಷೇತ್ರಗಳ ಪ್ರಮುಖರು ಬಾಡಿ ಪೇಂಟಿಂಗ್ ಹಾಕಿಕೊಂಡು ಪೋಸ್ ನೀಡಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...