alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ನಿಂದ ಹೊರ ಬೀಳ್ತಾರಾ ವೇಗಿಗಳು?ಕೊಹ್ಲಿ ನೀಡಿದ್ದಾರೆ ಮಹತ್ವದ ಸಲಹೆ

ಐಪಿಎಲ್ -2019ರ ನಂತ್ರ ಒನ್ ಡೇ ವಿಶ್ವಕಪ್ ನಡೆಯಲಿದೆ. ಇದಕ್ಕೆ ಈಗಿನಿಂದಲೇ ತಯಾರಿ ಶುರುವಾಗಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತದ ವೇಗದ ಬೌಲರ್ ಗಳಿಗೆ ವಿಶ್ರಾಂತಿಯ ಅಗತ್ಯವಿದೆ. ಐಪಿಎಲ್ ನಿಂದ ವೇಗಿಗಳನ್ನು ದೂರವಿಟ್ಟು ವಿಶ್ರಾಂತಿ ನೀಡಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ಸಿಒಎ ಮುಂದೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಸಿಒಎ ಸಮಿತಿ ಜೊತೆ ಸಭೆ ನಡೆಸಿದ ಕೊಹ್ಲಿ ಬುಮ್ರಾ, ಭುವನೇಶ್ವರ್ ಕುಮಾರ್ ಸೇರಿದಂತೆ ಉಳಿದ ವೇಗಿಗಳು ಮುಂದಿನ ವಿಶ್ವಕಪ್ ನಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ವಿಶ್ವಕಪ್ ನಲ್ಲಿ ಬೌಲರ್ ಗಳ ಆಟ ಮಹತ್ವ ಪಡೆಯುತ್ತದೆ. ಹಾಗಾಗಿ ಐಪಿಎಲ್ ನಿಂದ ವೇಗಿಗಳನ್ನು ದೂರವಿಟ್ಟು, ವಿಶ್ರಾಂತಿ ನೀಡಿ ಎಂದು ಕೊಹ್ಲಿ ಸಲಹೆ ನೀಡಿದ್ದಾರೆ. ಆಟಗಾರರನ್ನು ಕೇವಲ 8-10 ಪಂದ್ಯಗಳಲ್ಲಿ ಮಾತ್ರ ಆಡಿಸಿ. ಪಂದ್ಯದ ಆಯ್ಕೆಯನ್ನು ಅವರಿಗೆ ಬಿಡಿ ಎಂದು ಕೊಹ್ಲಿ ಹೇಳಿದ್ದಾರಂತೆ.

ಐಪಿಎಲ್ ನ ಆರಂಭದ ಪಂದ್ಯಗಳನ್ನ ಅಥವಾ ಕೊನೆಯ 8 ಪಂದ್ಯಗಳನ್ನ ಮಾತ್ರ ಆಡಿದ್ರೆ ಆಟಗಾರರಿಗೆ ಸ್ವಲ್ಪ ವಿಶ್ರಾಂತಿ ಸಿಗುತ್ತದೆ. ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ತೋರಬಹುದು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...