alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಾಡ್ಮನ್, ಪಾಂಟಿಂಗ್ ದಾಖಲೆ ಅಳಿಸಿ ಹಾಕಿದ ವಿರಾಟ್

ನಾಟಿಂಗ್ ಹ್ಯಾಮ್ ಅಂಗಳದಲ್ಲಿ ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಡಿಗೆ ಮತ್ತೊಂದು ಗರಿ ಸಂದಿದೆ. ವಿಜೇತ ತಂಡದ ಪರ ಎರಡೂ ಇನ್ನಿಂಗ್ಸ್ ನಲ್ಲಿ ಗರಿಷ್ಠ ಬಾರಿ 200 ಕ್ಕೂ ಹೆಚ್ಚು ರನ್ ಸಿಡಿಸಿದ ದಾಖಲೆ ಚೇಸಿಂಗ್ ಸ್ಟಾರ್ ಮುಕಟ ಸೇರಿದೆ.

ವಿರಾಟ್ ಒಟ್ಟು 7 ಬಾರಿ 200 ಕ್ಕೂ ಹೆಚ್ಚು ರನ್ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ಆಟಗಾರ ಡಾನ್ ಬ್ರಾಡ್ಮನ್ ಹಾಗೂ ರಿಕಿ ಪಾಂಟಿಂಗ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಇಬ್ಬರೂ ಸ್ಟಾರ್ ಆಟಗಾರರು ತಲಾ ಆರು ಬಾರಿ ಈ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ವೀರಾವೇಶದ ಬ್ಯಾಟಿಂಗ್ ನಡೆಸಿದ್ದರು. ರೂಟ್ ಪಡೆಯ ಬೌಲರ್ ಗಳ ವಿರುದ್ಧ ರನ್ ಹೊಳೆ ಹರಿಸಿದ್ದ ವಿರಾಟ್, ಮೊದಲ ಇನ್ನಿಂಗ್ಸ್ ನಲ್ಲಿ 93 ರನ್‍ ಸಿಡಿಸಿದ್ರು. ಎರಡನೇ ಇನ್ನಿಂಗ್ಸ್ ನಲ್ಲಿ 103 ರನ್ ಬಾರಿಸಿ ಅಬ್ಬರಿಸಿದ್ರು. ಈ ಮೂಲಕ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಒಟ್ಟು 200 ರನ್‍ ಕಲೆ ಹಾಕಿದ್ರು. ನಾಯಕನಾಗಿ ಪಂದ್ಯವೊಂದರಲ್ಲಿ 10ನೇ ಬಾರಿ 200ಕ್ಕೂ ಹೆಚ್ಚು ರನ್‌ಗಳನ್ನು ಸಂಪಾದಿಸಿದ್ದಾರೆ. ಇದು ಕೂಡ ದಾಖಲೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...