alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ದಾಖಲೆ ಮುರಿಯಲು ಧೋನಿ ರೆಡಿ

dhoni nn

ಟಿ-20 ಮತ್ತು ಏಕದಿನ ಪಂದ್ಯಗಳ ತಂಡದ ನಾಯಕರಾದ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ದಾಖಲೆ ಹಿಂದಿಕ್ಕಲು ಸಜ್ಜಾಗಿದ್ದಾರೆ.

ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದ್ದಾರೆ. ಅವರು ಇನ್ನು ಕೇವಲ 4 ಸಿಕ್ಸರ್ ಸಿಡಿಸಿದಲ್ಲಿ ಸಚಿನ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಲ್ಲಿ ಶಾಹಿದ್ ಅಫ್ರಿದಿ ಮೊದಲ ಸ್ಥಾನದಲ್ಲಿದ್ದಾರೆ. ಅಫ್ರಿದಿ 398 ಪಂದ್ಯಗಳಿಂದ 351 ಸಿಕ್ಸರ್ ಬಾರಿಸಿದ್ದಾರೆ.

ಶ್ರೀಲಂಕಾ ಆಟಗಾರ ಸನತ್ ಜಯಸೂರ್ಯ 445 ಪಂದ್ಯಗಳಿಂದ 270 ಸಿಕ್ಸರ್ ಬಾರಿಸಿ 2 ನೇ ಸ್ಥಾನದಲ್ಲಿದ್ದಾರೆ. ವಿಂಡೀಸ್ ಆಟಗಾರ ಕ್ರಿಸ್ ಗೇಲ್ 266 ಪಂದ್ಯಗಳಲ್ಲಿ 238 ಸಿಕ್ಸರ್ ಸಿಡಿಸಿದ್ದಾರೆ.

ಕಿವೀಸ್ ಆಟಗಾರ ಬಿ. ಮೆಕಲಮ್ 260 ಪಂದ್ಯಗಳಲ್ಲಿ 200 ಸಿಕ್ಸರ್ ಬಾರಿಸಿದ್ದು, ಸಚಿನ್ ತೆಂಡೂಲ್ಕರ್ 463 ಪಂದ್ಯಗಳಿಂದ 195 ಸಿಕ್ಸರ್, ಧೋನಿ 277 ಪಂದ್ಯಗಳಿಂದ 192 ಸಿಕ್ಸರ್ ಬಾರಿಸಿದ್ದಾರೆ. ಸೌರವ್ ಗಂಗೂಲಿ 311 ಪಂದ್ಯಗಳಿಂದ 190 ಸಿಕ್ಸರ್ ಬಾರಿಸಿದ್ದಾರೆ.

ಸೌತ್ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್ ಮನ್ ಎ.ಬಿ.ಡಿವಿಲಿಯರ್ಸ್ 97 ಪಂದ್ಯಗಳಿಂದ 182 ಸಿಕ್ಸರ್ ಬಾರಿಸಿದ್ದಾರೆ. ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ 375 ಪಂದ್ಯಗಳಿಂದ 162 ಸಿಕ್ಸರ್ ಬಾರಿಸಿದ್ದಾರೆ. ಸಚಿನ್ ದಾಖಲೆ ಹಿಂದಿಕ್ಕಲು ಧೋನಿ 4 ಸಿಕ್ಸರ್ ಬಾರಿಸಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...