alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವೆಬ್ ಸೈಟ್ ನಲ್ಲಿ ಸಿಗ್ತಿದೆ ಐಪಿಎಲ್ ಟಿಕೆಟ್

ಕ್ರಿಕೆಟ್ ಹಬ್ಬ ಐಪಿಎಲ್ ಶನಿವಾರದಿಂದ ಶುರುವಾಗ್ತಿದೆ. ಐಪಿಎಲ್ ಪಂದ್ಯಾವಳಿ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ಕುಳಿತಿದ್ದಾರೆ. ಐಪಿಎಲ್ ಆವೃತ್ತಿ 11 ಏಪ್ರಿಲ್ 7ರಿಂದ ಶುರುವಾಗಲಿದ್ದು, ಮೇ 27ರವರೆಗೆ ನಡೆಯಲಿದೆ. ಈ ಬಾರಿ ಎರಡು ಹಳೆ ತಂಡಗಳು ಐಪಿಎಲ್ ಗೆ ವಾಪಸ್ ಆಗಿವೆ.

ಐಪಿಎಲ್ ಪಂದ್ಯಗಳನ್ನು ಟಿವಿಯಲ್ಲಿ ನೋಡಲು ಕೆಲ ಅಭಿಮಾನಿಗಳು ಬಯಸಿದ್ರೆ ಮತ್ತೆ ಕೆಲವರು ಮೈದಾನಕ್ಕೆ ಹೋಗಿ ಪಂದ್ಯ ವೀಕ್ಷಿಸುವ ಆಸೆಯಲ್ಲಿದ್ದಾರೆ. ಆದ್ರೆ ಹೇಗೆ ಟಿಕೆಟ್ ಪಡೆಯೋದು ಎಂಬ ಪ್ರಶ್ನೆ ಕೆಲವರನ್ನು ಕಾಡ್ತಿದೆ. ಐಪಿಎಲ್ ಟಿಕೆಟ್ ಬೆಲೆ 400 ರೂಪಾಯಿಯಿಂದ ಶುರುವಾಗಿ 26,000 ರೂ.ವರೆಗಿದೆ. ಮುಂಬೈ ಇಂಡಿಯನ್ಸ್ ಆರಂಭಿಕ ಟಿಕೆಟ್ ಬೆಲೆ 800 ರೂ. ಆದ್ರೆ ರಾಜಸ್ತಾನ್ ರಾಯಲ್ಸ್ ಬೆಲೆ 500 ರೂಪಾಯಿಯಾಗಿದೆ.

ಐಪಿಎಲ್ ಟಿಕೆಟನ್ನು ಅಭಿಮಾನಿಗಳು ಆನ್ಲೈನ್ ಮೂಲಕ ಖರೀದಿ ಮಾಡಬಹುದಾಗಿದೆ. BookMyShow, Paytm ಮತ್ತು Insider ಅಧಿಕೃತ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವಿದೆ. ವೈಯಕ್ತಿಕವೊಂದೇ ಅಲ್ಲ ಕಾರ್ಪೋರೇಟ್ ಟಿಕೆಟ್ ಕೂಡ ಖರೀದಿ ಮಾಡಬಹುದು. ಮುಂಬೈ ಇಂಡಿಯನ್ಸ್ ತಂಡದ ಎಲ್ಲ ಆಟಗಳನ್ನು ನೋಡ ಬಯಸುವವರು ಮುಂಬೈ ಇಂಡಿಯನ್ಸ್ ಅಧಿಕೃತ ವೆಬ್ಸೈಟ್ ಗೆ ಹೋಗಿ ಟಿಕೆಟ್ ಖರೀದಿ ಮಾಡಬಹುದಾಗಿದೆ.

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತ್ಯಂತ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡ್ತಿದೆ. ತಂಡದ ಆರಂಭಿಕ ಟಿಕೆಟ್ ಬೆಲೆ 1200 ರೂಪಾಯಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...