alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಗೆ ದೊಡ್ಡ ಅಭಿಮಾನಿ ಹುಡುಕಿಕೊಟ್ಟ ಬ್ರೆಟ್ ಲೀ

ಆಸ್ಟ್ರೇಲಿಯಾಕ್ಕೆ ಟಕ್ಕರ್ ನೀಡಲು ಟೀಂ ಇಂಡಿಯಾ ಸಿದ್ಧವಾಗ್ತಿದೆ. ಈಗಾಗಲೇ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದಿದೆ. ತರಬೇತಿ ಕೂಡ ಶುರುಮಾಡಿದೆ. ಆಸ್ಟ್ರೇಲಿಯಾ ಟೀಂ ಜೊತೆ ಮಾಜಿ ಆಟಗಾರ ಬ್ರೆಟ್ ಲೀ ಕೂಡ ಬಂದಿದ್ದಾರೆ. ಭಾರತಕ್ಕೆ ಬಂದಿರುವ ಲೀ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಭಿಮಾನಿಯೊಬ್ಬರ ಫೋಟೋ ಹಾಕಿದ್ದಾರೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿರುವ ಬ್ರೆಟ್ ಲೀ ಸಚಿನ್ ನಿಮ್ಮ ದೊಡ್ದ ಅಭಿಮಾನಿಯೊಬ್ಬರನ್ನು ನಾನು ಹುಡುಕಿದ್ದೇನೆ ಎಂದು ಬರೆದಿದ್ದಾರೆ. ಹಾಗೆ ನಿಮ್ಮನ್ನು ಸಚಿನ್ ಗೆ ತೋರಿಸೋದಾಗಿ ಭರವಸೆ ನೀಡಿದ್ದೇನೆಂದು ಲೀ ಹೇಳಿದ್ದಾರೆ. ಲೀ ಹಾಕಿರುವ ಫೋಟೋದಲ್ಲಿರುವ  ಅಭಿಮಾನಿ ಮೈ ಮೇಲೆ ಸಚಿನ್ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

ಸದ್ಯ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಸೆಪ್ಟೆಂಬರ್ 17ರಂದು ಮೊದಲ ಪಂದ್ಯವನ್ನಾಡಲಿದೆ. ಐದು ಏಕದಿನ ಪಂದ್ಯ ಹಾಗೂ 3 ಟಿ-ಟ್ವೆಂಟಿ ಪಂದ್ಯಗಳಲ್ಲಿ ಉಭಯ ತಂಡಗಳು ಸೆಣೆಸಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...