alex Certify
ಕನ್ನಡ ದುನಿಯಾ       Mobile App
       

Kannada Duniya

ಅಖಾಡದಲ್ಲಿ ಕ್ರಿಕೆಟರ್ ಬ್ರೆಟ್ ಲೀ ದಂಗಲ್….

ಆಸ್ಟ್ರೇಲಿಯಾದ ಬ್ರೆಟ್ ಲೀ ಬಹುಮುಖ ಪ್ರತಿಭೆ. ಒಬ್ಬ ಟಾಪ್ ಕ್ರಿಕೆಟರ್, ನಟ ಹಾಗೂ ಗಿಟಾರ್ ವಾದಕನೂ ಹೌದು. ಇದೀಗ ಕುಸ್ತಿಯಲ್ಲೂ ಬ್ರೆಟ್ ಲೀ ತಮ್ಮ ಖದರ್ ತೋರಿಸಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್ ಕಮೆಂಟೇಟರ್ಸ್ ತಂಡದಲ್ಲಿರೋ ಬ್ರೆಟ್ ಲೀ, ಬಿಡುವಿನ ಸಮಯದಲ್ಲಿ ಕುಸ್ತಿಗೆ ಇಳಿದಿದ್ರು.

ಮಣ್ಣಿನ ಅಂಕಣದಲ್ಲಿ ಲೀ, ಜಗಜಟ್ಟಿಗಳ ಜೊತೆಗೆ ಸೆಣೆಸಾಡಿದ್ದಾರೆ. ಅಷ್ಟೇ ಅಲ್ಲ ಅವರಿಗೆ ತೀವ್ರ ಪೈಪೋಟಿಯನ್ನೂ ಒಡ್ಡಿದ್ದಾರೆ. ನೀಲಿ ಟಿ ಶರ್ಟ್ ಹಾಗೂ ಗ್ರೇ ಕಲರ್ ಶಾರ್ಟ್ಸ್ ಧರಿಸಿದ್ದ ಬ್ರೆಟ್ ಲೀ, ಭೂಮಿ ತಾಯಿಗೆ ನಮಸ್ಕರಿಸಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ರು.

ಅಷ್ಟೇ ಅಲ್ಲ ಸುತ್ತ ನೆರೆದಿದ್ದವರಿಗೂ ಲೀ ನಮಸ್ಕರಿಸಿದ್ದಾರೆ. ನುರಿತ ಕುಸ್ತಿ ಪಟುಗಳ ಮಧ್ಯೆ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಈ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...