alex Certify
ಕನ್ನಡ ದುನಿಯಾ       Mobile App
       

Kannada Duniya

ಬೂಟು ಕಳಚಿಟ್ಟ ಬ್ರೆಜಿಲ್ ನ ಖ್ಯಾತ ಫುಟ್ಬಾಲ್ ಆಟಗಾರ

ಬ್ರೆಜಿಲ್ ನ ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡಿನೋ ನಿವೃತ್ತಿ ಘೋಷಿಸಿದ್ದಾರೆ. 2002ರಲ್ಲಿ ಫಿಫಾ ವಿಶ್ವಕಪ್ ಗೆದ್ದಿದ್ದ ಬ್ರೆಜಿಲ್ ತಂಡದಲ್ಲಿ ರೊನಾಲ್ಡಿನೋ ಕೂಡ ಇದ್ದರು. 2006ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಚಾಂಪಿಯನ್ಸ್ ಲೀಗ್ ನಲ್ಲೂ ತಂಡವನ್ನು ಗೆಲ್ಲಿಸಿದ್ದರು.

ಬ್ರೆಜಿಲ್ ತಂಡದ ಪರ ರೊನಾಲ್ಡಿನೋ 97 ಪಂದ್ಯಗಳನ್ನಾಡಿದ್ದಾರೆ. 33 ಗೋಲು ಬಾರಿಸಿದ್ದಾರೆ. 2002 ಮತ್ತು 2006ರ ಫಿಫಾ ವಿಶ್ವಕಪ್ ನಲ್ಲಿ ಆಡಿದ್ದ ರೊನಾಲ್ಡಿನೋ, ತಮ್ಮ ಆಕ್ರಮಣಕಾರಿ ಶೈಲಿಯಿಂದ್ಲೇ ಹೆಸರು ಮಾಡಿದ್ದರು.

1987ರಲ್ಲಿ ಬ್ರೆಜಿಲಿಯನ್ ಕ್ಲಬ್ ಒಂದರ ಪರವಾಗಿ ಮೊದಲ ಬಾರಿ ಕಣಕ್ಕಿಳಿದಿದ್ದ ಫುಟ್ಬಾಲಿಗ, ನಂತರ ತಮ್ಮ ವಿಶಿಷ್ಟ ಆಟದಿಂದಾಗಿಯೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ನಂತರ ಯುರೋಪ್ ಗೆ ತೆರಳಿದ್ದ ಅವರು ಫ್ರೆಂಬ್ ಕ್ಲಬ್ ಪರವಾಗಿಯೂ ಆಡಿದ್ದರು.

2008 ರಿಂದ 2011 ರವರೆಗೆ ಇಟಲಿಯ ಎಸಿ ಮಿಲಾನ್ ತಂಡದಲ್ಲಿದ್ದ ರೊನಾಲ್ಡಿನೊ,  2011 ರಲ್ಲಿ ರೊನಾಲ್ಡಿನೋ ಬ್ರೆಜಿಲ್ ಗೆ ಮರಳಿದ್ದರು. 2015ರಲ್ಲಿ ರೊನಾಲ್ಡಿನೊ ತಮ್ಮ ವೃತ್ತಿ ಬದುಕಿನ ಕೊನೆಯ ಪಂದ್ಯವನ್ನಾಡಿದ್ದರು.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...