alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಫಾಗಾಗಿ ಬ್ರೆಜಿಲ್ ಮಾಡಿದ ಈ ಕೆಲಸ ಭಾರತದಲ್ಲಿ ಅಸಾಧ್ಯ

ಭಾರತ, ಕ್ರಿಕೆಟ್ ಪ್ರೇಮಿಗಳ ದೇಶ. ಕ್ರಿಕೆಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳದೆ ತುದಿಗಾಲಿನಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಐಪಿಎಲ್ ಇರಲಿ, ವಿಶ್ವಕಪ್ ಇರಲಿ ಇಲ್ಲ ಟೆಸ್ಟ್ ಪಂದ್ಯವೇ ಇರಲಿ. ಭಾರತದಲ್ಲಿ ಎಲ್ಲ ರೀತಿಯ ಕ್ರಿಕೆಟ್ ಪಂದ್ಯಗಳನ್ನು ಅಭಿಮಾನಿಗಳು ವೀಕ್ಷಣೆ ಮಾಡ್ತಾರೆ.

ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದರೆ ಬ್ರೆಜಿಲ್ ನಲ್ಲಿ ಫುಟ್ಬಾಲ್ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಫಿಫಾ ವಿಶ್ವಕಪ್ ಇನ್ನೇನು ಶುರುವಾಗಲಿದೆ. ಇದಕ್ಕೆ ಎಲ್ಲ ತಯಾರಿ ನಡೆಯುತ್ತಿದೆ. ಬ್ರೆಜಿಲ್ ಕೂಡ ತನ್ನ ದೇಶದ ಫುಟ್ಬಾಲ್ ಪ್ರಿಯರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದೆ.

2019 ರಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಭಾರತೀಯರು ಯಾವುದೇ ತೊಂದರೆ ಇಲ್ಲದೆ ವೀಕ್ಷಣೆ ಮಾಡೋದು ಕಷ್ಟಸಾಧ್ಯ. ಕರೆಂಟ್ ಕಟ್ ಕ್ರಿಕೆಟ್ ಪ್ರೇಮಿಗಳನ್ನು ನಿರಾಶೆ ಮಾಡದೆ ಇರದು. ಆದ್ರೆ ಬ್ರೆಜಿಲ್ ನಲ್ಲಿ ಈ ಬಾರಿ ಫುಟ್ಬಾಲ್ ಪ್ರೇಮಿಗಳಿಗೆ ಕರೆಂಟ್ ಕಟ್ ಸಮಸ್ಯೆ ಆಗೋದಿಲ್ಲ. ಬ್ರೆಜಿಲ್ ಪಂದ್ಯಗಳಿರುವಾಗ ದೇಶದ ಮೂಲೆ ಮೂಲೆಗಳಲ್ಲಿ ಕರೆಂಟ್ ಇರುವಂತೆ ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಬ್ರೆಜಿಲ್ ನಲ್ಲಿ ವಿದ್ಯುತ್ ಪೂರೈಕೆ ಭಾರತಕ್ಕಿಂತ ಕೆಟ್ಟದಾಗಿದೆ. 13 ರಾಜ್ಯಗಳ ಜನರು ವಿದ್ಯುತ್ ವ್ಯತ್ಯಯಕ್ಕೆ ಕಿರಿಕಿರಿ ಅನುಭವಿಸುತ್ತಿದ್ದಾರೆ. ಫಿಫಾ ಪಂದ್ಯದ ವೇಳೆ ಜನರಲ್ಲಿ ನಿರಾಶೆ ಮೂಡದಿರಲಿ ಎನ್ನುವ ಕಾರಣಕ್ಕೆ ಪಂದ್ಯ ಆರಂಭಕ್ಕಿಂತ ಎರಡು ಗಂಟೆ ಮೊದಲಿನಿಂದಲೇ ಎಚ್ಚರಿಕೆ ವಹಿಸಲಾಗುವುದು ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...