alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪಾಟ್ ಫಿಕ್ಸಿಂಗ್ ಕುರಿತು ಬಹಿರಂಗವಾಗಿದೆ ಶಾಕಿಂಗ್ ಮಾಹಿತಿ

ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಟದ ಮೇಲಿನ ನಂಬುಗೆಯನ್ನು ಬುಡಮೇಲು ಮಾಡಿದ್ದ ಸ್ಪಾಟ್ ಫಿಕ್ಸಿಂಗ್ ಭೂತ ಮತ್ತೆ ಕಾಣಿಸಿಕೊಂಡಿದೆ.

ಕಳೆದ ಒಂದು ವರ್ಷದಲ್ಲಿ ಐದು ಅಂತರಾಷ್ಟ್ರೀಯ ತಂಡಗಳ ನಾಯಕರನ್ನು ಬುಕ್ಕಿಗಳು ಸಂಪರ್ಕಿಸಿದ್ದಾರೆಂದು ಅಂತರಾಷ್ಟ್ರಿಯ ಕ್ರಿಕೆಟ್ ಕೌನ್ಸಿಲ್ ನ ಆಡಳಿತ ಮಂಡಳಿಯೇ ಈ ಸಂಗತಿಯನ್ನು ಬಹಿರಂಗಪಡಿಸಿದೆ.

ಅಷ್ಟೇ ಅಲ್ಲದೇ, ಇದೀಗ ನಡೆಯುತ್ತಿರುವ ಏಷಿಯಾ ಕಪ್ ವೇಳೆ ಅಫ್ಘಾನ್ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಅವರನ್ನೂ ಕೂಡ ಬುಕ್ಕಿಗಳು ಸಂಪರ್ಕಿಸಿದ್ದರೆಂಬ ಆಘಾತಕಾರಿ ಸಂಗತಿಯನ್ನೂ ಐಸಿಸಿ ಬಹಿರಂಗಪಡಿಸಿದೆ. ಶಾರ್ಜಾದಲ್ಲಿ ನಡೆಯುವ ಪ್ರೀಮಿಯರ್ ಲೀಗ್ ಟಿ-20 ಯಲ್ಲಿ ಬುಕ್ಕಿ ಒತ್ತಡ ಹೇರಿದ್ದ ಎನ್ನಲಾಗಿದೆ.

ಯೂನಿಟ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಈ ಸಂಗತಿಯನ್ನು ಖಚಿತಪಡಿಸಿದ್ದು, ಯಾವ ನಾಯಕರನ್ನು ಬುಕ್ಕಿಗಳು ಸಂಪರ್ಕಿಸಿದ್ದರೆಂದು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಐವರು ನಾಯಕರಿಗೆ ಅನುಮಾನಾಸ್ಪದವಾಗಿ ಕೋರಿಕೆಗಳು ಬಂದಿವೆ ಎಂಬುದು ಖಚಿತ ಎಂದಿದ್ದಾರೆ.

ಆಫ್ಘಾನ್ ಕ್ರಿಕೆಟರ್ ಶಹಜಾದ್ ತಂಗಿದ್ದ ಹೋಟೆಲ್ ನಲ್ಲಿ ಅನುಮಾನಾಸ್ಪದ ವ್ಯಕ್ತಿ ಶನಿವಾರ ಭೇಟಿ ಮಾಡಲು ಬಂದಿದ್ದು, ಇದೀಗ ಆಫ್ಘಾನ್ ಕ್ರಿಕೆಟ್ ತಂಡ ಐಸಿಸಿಗೆ ಅಧಿಕೃತ ದೂರು ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...