alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ತಂದೆಗೆ ತಿರುಗೇಟು ನೀಡಿದ ಮಿಲ್ಕಾ ಸಿಂಗ್

milkha-singh-700ರಿಯೋ ಒಲಂಪಿಕ್ಸ್ ಗೆ ಭಾರತ ತಂಡದ ರಾಯಭಾರಿಯಾಗಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ನೇಮಕ ಮಾಡಿರುವುದಕ್ಕೆ ಪರ- ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿರುವ ಮಧ್ಯೆ ತಮ್ಮ ಕುರಿತು ಟ್ವೀಟ್ ಮಾಡಿದ್ದ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರಿಗೆ ಮಿಲ್ಕಾ ಸಿಂಗ್ ತಿರುಗೇಟು ನೀಡಿದ್ದಾರೆ.

ಸಲ್ಮಾನ್ ನೇಮಕಕ್ಕೆ ಈಗಲೂ ವಿರೋಧ ವ್ಯಕ್ತಪಡಿಸುತ್ತಿರುವ ಮಿಲ್ಕಾ ಸಿಂಗ್, ಒಲಂಪಿಕ್ಸ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಎಲ್ಲ ಕ್ರೀಡಾಪಟುಗಳು ಭಾರತದ ರಾಯಭಾರಿಗಳಾಗಿದ್ದು, ಒಂದು ವೇಳೆ ರಾಯಭಾರಿಯನ್ನು ನೇಮಿಸಲೇಬೇಕೆಂದಿದ್ದರೆ ಕ್ರೀಡಾ ಸಾಧಕರನ್ನು ನೇಮಿಸಲಿ ಎಂದು ಪುನರುಚ್ಚರಿಸಿದ್ದಾರೆ.

ಜೊತೆಗೆ ಸಲೀಂ ಖಾನ್ ಅವರ ಟ್ವೀಟ್ ಗೆ ತಿರುಗೇಟು ನೀಡಿದ ಮಿಲ್ಕಾ ಸಿಂಗ್, ತಮ್ಮ ಜೀವನಾಧರಿತ ಚಿತ್ರ ‘ಭಾಗ್ ಮಿಲ್ಕಾ ಭಾಗ್’ ಬಾಲಿವುಡ್ ನಲ್ಲಿ ನಿರ್ಮಾಣವಾಗಿದ್ದರಿಂಧ ತಮಗ್ಯಾವ ಉಪಕಾರವೂ ಆಗಿಲ್ಲ. ಕೇವಲ 1 ರೂ. ಪಡೆದು ಚಿತ್ರ ನಿರ್ಮಾಣಕ್ಕೆ ಅನುಮತಿ ನೀಡಿದ್ದಾಗಿ ತಿಳಿಸಿದ್ದಾರಲ್ಲದೇ ಇದರಿಂದ ಚಿತ್ರ ಕೋಟ್ಯಾಂತರ ರೂ. ಹಣ ಗಳಿಸಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...