alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ನ್ಯೂಸ್: ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಸಲ್ಮಾನ್ ಸಹೋದರ

ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಖ್ಯಾತ ಚಿತ್ರನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ವಿಚಾರಣೆಗಾಗಿ ಇಂದು ಮುಂಬೈನ ಥಾಣೆ ಪೊಲೀಸರ ಮುಂದೆ ಹಾಜರಾಗಿದ್ದಾರೆ.

ವಿಚಾರಣೆ ವೇಳೆ ಪೊಲೀಸರು, ಕುಖ್ಯಾತ ಬುಕ್ಕಿ ಸೋನು ಜಲಾನ್ ಹಾಗೂ ಅರ್ಬಾಜ್ ಖಾನ್ ರನ್ನು ಮುಖಾಮುಖಿಯಾಗಿಸಿದ್ದು, ತಾವು ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವುದು ನಿಜ ಎಂದು ಅರ್ಬಾಜ್ ಖಾನ್ ಒಪ್ಪಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ಹೇಳಿವೆ.

ಮೇ 15 ರಂದು ಐಪಿಎಲ್ ಬೆಟ್ಟಿಂಗ್ ಧಂದೆ ಬಯಲಿಗೆಳೆದಿದ್ದ ಪೊಲೀಸರು ಬುಕ್ಕಿ ಸೋನು ಜಲಾನ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ಸೋನು ಬಳಿ ದೊರೆತ ಡೈರಿಯೊಂದರಲ್ಲಿದ್ದ ಹೆಸರುಗಳನ್ನು ಕಂಡು ಪೊಲೀಸರೇ ದಂಗಾಗಿದ್ದರು. ಬಾಲಿವುಡ್ ಸೆಲೆಬ್ರಿಟಿಗಳು, ಉದ್ಯಮಿಗಳ ಹೆಸರು ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಸೋನುವಿನ ಡೈರಿಯಲ್ಲಿ ದಾಖಲಾಗಿತ್ತು.

ಇದೀಗ ಒಬ್ಬೊಬ್ಬರನ್ನಾಗಿ ಡ್ರಿಲ್ ಮಾಡುತ್ತಿರುವ ಪೊಲೀಸರು, ಇಂದು ಅರ್ಬಾಜ್ ಖಾನ್ ರನ್ನು ವಿಚಾರಣೆಗೆ ಕರೆಸಿಕೊಂಡಿದ್ದು, ಈ ವೇಳೆ ಐಪಿಎಲ್ ಬೆಟ್ಟಿಂಗ್ ನಲ್ಲಿ ತಾವು ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...