alex Certify
ಕನ್ನಡ ದುನಿಯಾ       Mobile App
       

Kannada Duniya

ಇಶಾ ಗುಪ್ತಾ ಜೊತೆ ಪಾಂಡ್ಯ ಸೀಕ್ರೆಟ್ ಡೇಟಿಂಗ್

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ಇಶಾ ಗುಪ್ತಾ ಮತ್ತೆ ಸುದ್ದಿಯಲ್ಲಿದ್ದಾರೆ. ಇಶಾ ಹಾಗೂ ಪಾಂಡ್ಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದು ಸತ್ಯವಾಗ್ತಿದೆ. ಇಶಾ ಆಪ್ತರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಶಾಗೆ ಹಾರ್ದಿಕ್ ತುಂಬಾ ಇಷ್ಟವಾಗಿದ್ದಾರಂತೆ. ಪಾಂಡ್ಯ, ಇಶಾಗಾಗಿ ಮಾಡುವ ಸಣ್ಣ ಸಣ್ಣ ಕೆಲಸವೂ ಇಶಾಗೆ ಇಷ್ಟವಾಗ್ತಿದೆಯಂತೆ. ಇಶಾ ಹಾಗೂ ಪಾಂಡ್ಯ ಔಟಿಂಗ್ ಇಷ್ಟಪಡೋದಿಲ್ಲ. ಖಾಸಗಿಯಾಗಿ ಸಮಯ ಕಳೆಯಲು ಬಯಸ್ತಾರೆ. ಹಾಗಾಗಿ ಇಬ್ಬರು ಸಾರ್ವಜನಿಕರ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳೋದಿಲ್ಲ ಎಂದು ಮೂಲಗಳು ಹೇಳಿವೆ.

ಇಶಾ ಹಾಗೂ ಪಾಂಡ್ಯಾ ಈವರೆಗೂ ಈ ಸಂಬಂಧದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಂಡ್ಯ ಹೆಸರು ಈ ಹಿಂದೆ ಎಲಿ ಅವರಾಮ್ ಜೊತೆ ಥಳಕು ಹಾಕಿಕೊಂಡಿತ್ತು. ಇಬ್ಬರೂ ಚರ್ಚಿಸಿ ಬೇರೆಯಾಗಿದ್ದಾರೆಂಬ ಮಾತುಗಳಿವೆ. ಪಾಂಡ್ಯ ಸಹೋದರನ ಮದುವೆಯಲ್ಲಿ ಎಲಿ ಕಾಣಿಸಿಕೊಂಡು ಚರ್ಚೆಯಾಗಿದ್ದರು. ನಂತ್ರ ಪಾಂಡ್ಯ ಹೆಸರು ಬೋಲ್ಡ್ ನಟಿ ಊರ್ವಶಿ ಜೊತೆ ಕೂಡ ಕೇಳಿ ಬಂದಿತ್ತು. ಈಗ ಇಶಾ ಗುಪ್ತಾ  ಹಾಗೂ ಪಾಂಡ್ಯ ಡೇಟಿಂಗ್ ಮಾಡ್ತಿದ್ದಾರೆಂಬ ಸುದ್ದಿಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...