alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟಂಟ್ ಮಾಡಲು ಹೋಗಿ ಬಾಡಿಬಿಲ್ಡರ್ ಸಾವು

body-d

ಜೋಹಾನ್ಸ್ ಬರ್ಗ್: ಆಘಾತಕಾರಿ ಘಟನೆಯೊಂದರಲ್ಲಿ ಬಾಡಿ ಬಿಲ್ಡರ್ ಒಬ್ಬರು ಸ್ಟಂಟ್ ಮಾಡಲು ಹೋಗಿ ದುರಂತ ಸಾವು ಕಂಡಿದ್ದಾರೆ.

ಸೌಥ್ ಆಫ್ರಿಕಾದಲ್ಲಿ ನಡೆದ ಟೂರ್ನಿಯೊಂದರ ಅಂಗಳದಲ್ಲಿ ಹಿಮ್ಮುಖವಾಗಿ ಜಂಪ್ ಮಾಡಿದಾಗ ಆಯತಪ್ಪಿ ಬಿದ್ದ ಪರಿಣಾಮ, ಬಾಡಿ ಬಿಲ್ಡರ್ ಕುತ್ತಿಗೆ ಮುರಿದುಕೊಂಡು ಸಾವನ್ನಪ್ಪಿದ್ದಾರೆ.

ಸಿಫಿಸೊ ಥಬೆಟ್ಟೆ ಮೃತಪಟ್ಟ ಬಾಡಿ ಬಿಲ್ಡರ್. 75 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಥಬೆಟ್ಟೆ ತಮ್ಮ ಸರದಿ ಬಂದಾಗ ಅಂಗಳಕ್ಕೆ ಬಂದಿದ್ದಾರೆ.

ಬರುವ ಸಂದರ್ಭದಲ್ಲಿ ಜೋಶ್ ನಲ್ಲಿದ್ದ ಅವರು ಹಿಮ್ಮುಖವಾಗಿ ಜಂಪ್ ಮಾಡಿ ಕೆಳಕ್ಕೆ ಬಿದ್ದಿದ್ದಾರೆ. ಬೀಳುವ ಸಂದರ್ಭದಲ್ಲಿ ಆಯತಪ್ಪಿ ಕುತ್ತಿಗೆ ಮುರಿದಿದೆ.

ಮೈದಾನದಲ್ಲಿಯೇ ಕುಸಿದು ಬಿದ್ದ ಥಬೆಟ್ಟೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ತೀರ್ಪುಗಾರರು, ಪ್ರೇಕ್ಷಕರು, ಕ್ರೀಡಾಪಟುಗಳ ಕಣ್ಣೆದುರಲ್ಲೇ ಘಟನೆ ನಡೆದಿದ್ದು, ಆರಂಭದಲ್ಲಿ ಥಬೆಟ್ಟೆ ಚೇತರಿಸಿಕೊಳ್ಳಬಹುದೆಂದು ಅಲ್ಲಿದ್ದವರು ಭಾವಿಸಿದ್ದರು. ಆದರೆ, ಅತೀವ ಪೆಟ್ಟಾದ ಕಾರಣ ಅವರು ಮೃತಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...