alex Certify
ಕನ್ನಡ ದುನಿಯಾ       Mobile App
       

Kannada Duniya

30 ಲಕ್ಷಕ್ಕೆ ಹರಾಜಾದ್ರು ‘ಕೋಟ್ಯಾಧಿಪತಿ’ ಬಿರ್ಲಾ ಮಗ….!

ಐಪಿಎಲ್ 2018ರ  ಆಟಗಾರರ ಹರಾಜು ಪ್ರಕ್ರಿಯೆ ಅಚ್ಚರಿಗೊಳಿಸುವಂತಹ ಘಟನೆಗಳಿಗೆ ಸಾಕ್ಷಿಯಾಗಿದೆ. ಕೆಲ ಕ್ರಿಕೆಟ್ ದಂತಕಥೆ ಹಾಗೂ ಐಪಿಎಲ್ ಸ್ಟಾರ್ ಆಟಗಾರರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಮನಸ್ಸು ಮಾಡಲಿಲ್ಲ. ಹಾಗೆ ಕೆಲ ಹೊಸಬರಿಗೆ ಐಪಿಎಲ್ ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಲಕ್ಷಾಂತರ ರೂಪಾಯಿ ನೀಡಿ ಖರೀದಿ ಮಾಡಿದೆ.

ಯುವ ಆಟಗಾರರೊಬ್ಬರನ್ನು 30 ಲಕ್ಷ ರೂಪಾಯಿ ನೀಡಿ ಫ್ರಾಂಚೈಸಿಯೊಂದು ಖರೀದಿ ಮಾಡಿದೆ. ಆದ್ರೆ ಆ ಯುವ ಆಟಗಾರ ಮೊದಲೇ ಕೋಟ್ಯಾಧಿಪತಿ. ಯಸ್. ಈ ಕೋಟ್ಯಾಧಿಪತಿ ಆಟಗಾರನ ಹೆಸರು ಆರ್ಯಮನ್ ಬಿರ್ಲಾ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಪಡೆದಿರುವ ಕುಮಾರ್ ಮಂಗಲಂ ಬಿರ್ಲಾ ಮಗ.

ಮೊದಲ ದಿನ ಯಾವುದೇ ಫ್ರಾಂಚೈಸಿ ಆರ್ಯಮನ್ ಖರೀದಿಗೆ ಮುಂದಾಗಿರಲಿಲ್ಲ. ಎರಡನೇ ದಿನ ರಾಜಸ್ತಾನ್ ರಾಯಲ್ಸ್ 30 ಲಕ್ಷಕ್ಕೆ ಖರೀದಿ ಮಾಡಿದೆ. 20 ವರ್ಷದ ಆರ್ಯಮನ್ ಆಲ್ರೌಂಡರ್. ಮೊದಲು ಮುಂಬೈಗೆ ಆಟವಾಡ್ತಿದ್ದರು. ಆದ್ರೆ ರಣಜಿಯಲ್ಲಿ ಸ್ಥಾನ ಸಿಗದ ಕಾರಣ ಮಧ್ಯಪ್ರದೇಶ್ ಕಡೆ ಆರ್ಯಮನ್ ಮುಖ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...