alex Certify
ಕನ್ನಡ ದುನಿಯಾ       Mobile App
       

Kannada Duniya

ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾದ ರೇಸರ್

ವಾಹನ ಚಾಲನೆ ಮಾಡುವ ವೇಳೆ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತವೆ. ಅದರಲ್ಲೂ ರೇಸ್ ನಲ್ಲಿ ಈ ಅಪಾಯ ಹೆಚ್ಚು. ಹೀಗೆ ಬೈಕ್ ರೇಸ್ ನಲ್ಲಿ ಪಾಲ್ಗೊಂಡಿದ್ದವನೊಬ್ಬ ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾನೆ.

ಫ್ರೆಂಚ್ ಗ್ರಾಂಡ್ ಪ್ರಿಕ್ಸ್ ನ ಮೋಟೋ 3 ರೇಸ್ ವೇಳೆ ಜಾಕೋಬ್ ಎಂಬಾತ ವೇಗವಾಗಿ ಸಾಗುತ್ತಿದ್ದು, ಈ ಸಂದರ್ಭದಲ್ಲಿ ಆತನ ಮುಂದಿದ್ದ ಮತ್ತೊಬ್ಬ ರೇಸರ್ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾನೆ.

ಆತನಿಂದ ಕೂದಲೆಳೆ ಅಂತರದಲ್ಲಿದ್ದ ಜಾಕೋಬ್ ನ ಬೈಕ್ ಇನ್ನೇನು ಆ ಬೈಕ್ ಗೆ ಡಿಕ್ಕಿ ಹೊಡೆಯಲಿದೆ ಎನ್ನುವ ಸಂದರ್ಭದಲ್ಲಿ ಚಾಕಚಕ್ಯತೆಯಿಂದ ತನ್ನ ಬೈಕನ್ನು ಮೇಲೆ ಹಾರಿಸಿದ ಜಾಕೋಬ್ ಅಪಘಾತವನ್ನು ತಪ್ಪಿಸಿದ್ದಾನೆ. ಅಷ್ಟೇ ಅಲ್ಲ ತನ್ನ ರೇಸ್ ಮುಂದುವರಿಸಿದ ಆತ ಆರನೇ ಸ್ಥಾನದಲ್ಲಿ ರೇಸ್ ಪೂರೈಸಿದ್ದಾನೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಡೆ ಕ್ಷಣದಲ್ಲಿ ಜಾಕೋಬ್ ಮಾಡಿದ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

— MotoGP™🇫🇷🏁 (@MotoGP) May 21, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...