alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯವನ್ನಾಡದಿದ್ದರೂ ಸಂಸದರ ಪುತ್ರನ ಆಯ್ಕೆ…!

ಕ್ರೀಡೆ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ರಾಜಕೀಯ ಪ್ರಭಾವ ಹೆಚ್ಚುತ್ತಿರುವ ಕಾರಣ ಪ್ರತಿಭಾನ್ವಿತರಿಗೆ ಅವಕಾಶ ಸಿಗುತ್ತಿಲ್ಲವೆಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಉದಾಹರಣೆಯೆಂಬಂತೆ ಈಗ ಮತ್ತೊಂದು ಪ್ರಕರಣ ನಡೆದಿದೆ.

ಬಿಹಾರದ ವಿವಾದಾತ್ಮಕ ಸಂಸದ ಪಪ್ಪು ಯಾದವ್ ರ ಪುತ್ರ ಸರ್ತಾಕ್ ರಂಜನ್, ಯಾವುದೇ ಪಂದ್ಯಗಳನ್ನಾಡದಿದ್ದರೂ ದೆಹಲಿ ಟಿ20 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪಪ್ಪು ಯಾವದ್ ಈ ಹಿಂದೆ ರಾಷ್ಟ್ರೀಯ ಜನತಾದಳದಲ್ಲಿದ್ದು, ಈಗ ತಮ್ಮದೇ ಪಕ್ಷ ಸ್ಥಾಪಿಸಿಕೊಂಡು ಮಾದೇಪುರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅವರ ಪತ್ನಿ ರಂಜಿತಾ, ಸುಪೌಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಪ್ರಭಾವಿ ವ್ಯಕ್ತಿಗಳ ಪುತ್ರನೆಂಬ ಕಾರಣಕ್ಕೆ ಸರ್ತಾಕ್ ರಂಜನ್ ಆಯ್ಕೆಯಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಶಾಕಿಂಗ್ ಸಂಗತಿಯೆಂದರೆ ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ಒಂದು ಶತಕ, ಮೂರು ಅರ್ಧ ಶತಕ ಗಳಿಸಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಹಿತೇನ್ ದಲಾಲ್ ರನ್ನು ಆಯ್ಕೆಗಾರರು ಕಡೆಗಣಿಸಿದ್ದಾರೆ. ಸರ್ತಾಕ್ ರಂಜನ್ ಈ ಹಿಂದೆ ಆಯ್ಕೆಯಾದ ಸಂದರ್ಭದಲ್ಲಿ ಮೂರು ಪಂದ್ಯಗಳಿಂದ 5, 3, 2 ರಂತೆ ಕೇವಲ 10 ರನ್ ಗಳಿಸಿದ್ದಾರೆ. ಸರ್ತಾಕ್ ರಂಜನ್ ಆಯ್ಕೆ ಕುರಿತು ವಿವಾದ ಭುಗಿಲೇಳುತ್ತಿದ್ದಂತೆಯೇ ಆಯ್ಕೆ ಸಮಿತಿ ಸಮರ್ಥನೆ ಮಾಡಿಕೊಳ್ಳುವ ಮೂಲಕ ಮತ್ತಷ್ಟು ಮುಜುಗರಕ್ಕೆ ಒಳಗಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...