alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯಲ್ಲಿ ಶ್ರೀಶಾಂತ್ ಕಿರಿಕ್

ಹಿಂದಿಯ ‘ಬಿಗ್ ಬಾಸ್’ ಸೀಸನ್ 12, ಶುರುವಾಗಿ ಎರಡು ದಿನಗಳು ಕಳೆದಿವೆ. ಅಷ್ಟರಲ್ಲೇ ಟೀಮ್ ಬಿಗ್ ಹೌಸ್ ನಲ್ಲಿ ಗಲಾಟೆ ಶುರುವಾಗಿದೆ. ಎರಡನೇ ದಿನವೇ ವೀಕ್ಷಕರಿಗೆ ಬಿಗ್ ಬಾಸ್ ಮನೆಯಲ್ಲಿ ಕಾವೇರಿದ ಕ್ಷಣಗಳನ್ನು ನೋಡುವಂತಾ ಅವಕಾಶ ಸಿಕ್ಕಿದೆ.

ಕ್ರಿಕೆಟ್ ಮೈದಾನಲ್ಲಿ ಸಿಕ್ಕಾಪಟ್ಟೆ ಅಗ್ರೆಸ್ಸಿವ್ ಆಗಿ ಕಾಣಿಸಿಕೊಳ್ತಿದ್ದ ಮಾಜಿ ಟೀಮ್ ಇಂಡಿಯಾ ಆಟಗಾರ ಬಿಗ್ ಬಾಸ್ ಮನೆಯಲ್ಲಿ ಎರಡನೇ ದಿನ ಅದೇ ಅಗ್ರೆಸ್ಸಿವ್ ಆಗಿ ಕಾಣಿಸಿಕೊಂಡಿದ್ದಾರೆ.

ಮೊದಲ ದಿನ ಕೂಲ್ ಅಂಡ್ ಕಾಮ್ ಆಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಶ್ರೀಶಾಂತ್ ಎರಡನೇ ದಿನ ಅದಕ್ಕೆ ತದ್ವಿರುದ್ಧವಾದ ರೀತಿ ಕಾಣಿಸಿಕೊಂಡರು. ಬಿಗ್ ಬಾಸ್ ನ ಮತ್ತಿಬ್ಬರು ಸ್ಪರ್ಧಿಗಳಾದಂತಾ ಸಬಾಖಾನ್ ಮತ್ತು ಶೋಮಿ ಸೋದರಿಯೊಂದಿಗೆ ಕಾವೇರಿದ ಚರ್ಚೆಯಲ್ಲಿ ಶ್ರೀಶಾಂತ್ ಕಾಣಿಸಿಕೊಂಡರು.

ಆಂಗ್ರಿ ಬರ್ಡ್ ರೀತಿಯಲ್ಲಿ ಆಡುತ್ತಿದ್ದ ಶ್ರೀಶಾಂತ್ ಆಟವನ್ನು ಕ್ವಿಟ್ ಮಾಡಿದ್ದಲ್ಲದೆ ಬಿಗ್ ಬಾಸ್ ಷೋ ನಿಂದಲೇ ಹೊರ ನಡೆಯಲು ನಿರ್ಧರಿಸಿಬಿಟ್ಟಿದ್ದರು. ಆನಂತರದಲ್ಲಿ ಕರಣ್ ವೀರ್ ಬೋಹ್ರಾ ಈ ಜಗಳದ ಮಧ್ಯೆ ಪ್ರವೇಶಿಸಿದ ನಂತರದಲ್ಲಿ ಶ್ರೀಶಾಂತ್ ಕ್ಷಮೆ ಕೇಳಿದ್ರು.

ಬಿಗ್ ಬಾಸ್ ಪ್ರೆಸ್ ಕಾನ್ಫರೆನ್ಸ್ ನ ಸೋಮವಾರದ ಎಪಿಸೋಡ್ ನ ಮುಂದುವರೆದ ಭಾಗದಲ್ಲಿ ಕಳೆದ ಸೀಸನ್ ನ ಬಿಗ್ ಬಾಸ್ ಸ್ಪರ್ಧಿ ಶಿಲ್ಪಾ ಶಿಂಧೆ ಮತ್ತು ಕರಣ್ ಪಟೇಲ್ ಕಾಣಿಸಿಕೊಂಡಿದ್ದರು. ಪುರುಷ ಸ್ಪರ್ಧಿಗಳು ಅಡುಗೆ ಮನೆಯ ಜವಾಬ್ದಾರಿ ತೆಗೆದುಕೊಂಡಿದ್ದು, ವೃತ್ತಾಕಾರದ ಚಪಾತಿ ಮಾಡುವಲ್ಲಿ ಶ್ರೀಶಾಂತ್ ಕಷ್ಟ ಪಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...