alex Certify
ಕನ್ನಡ ದುನಿಯಾ       Mobile App
       

Kannada Duniya

ಭುವನೇಶ್ವರ್ ಕುಮಾರ್ ಮದುವೆಗೆ ಭರ್ಜರಿ ಸಿದ್ಧತೆ

ಭಾರತದ ವೇಗಿ ಭುವನೇಶ್ವರ್ ಕುಮಾರ್ ಮದುವೆಗೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಟೀಂ ಇಂಡಿಯಾ ಆಟಗಾರರಿಗೆ ಭುವನೇಶ್ವರ್ ಕುಮಾರ್ ಮದುವೆ ಆಹ್ವಾನ ಹೋಗಿದೆ. ನವೆಂಬರ್ 8ರಂದು ಭುವನೇಶ್ವರ್ ಕುಮಾರ್ ಮೀರತ್ ಗಂಗಾನಗರದಲ್ಲಿರುವ ತಮ್ಮ ಮನೆಗೆ ಬರಲಿದ್ದಾರೆ. ನವೆಂಬರ್ 23ರಂದು ಹೊಟೇಲ್ ಬ್ರೂವಾರಾದಲ್ಲಿ ಭುವನೇಶ್ವರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮದುವೆ ಸಮಾರಂಭಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೈನಾ ಆಗಮಿಸೋದು ಬಹುತೇಕ ಖಚಿತವಾಗಿದೆ. ಟೀಂ ಇಂಡಿಯಾದ ಉಳಿದ ಆಟಗಾರರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗ್ತಿದೆ.

ಭುವನೇಶ್ವರ್ ಕುಮಾರ್ 23 ರಂದು ನೂಪುರ್ ಕೈ ಹಿಡಿಯಲಿದ್ದಾರೆ. ಮದುವೆಗೆ ಎರಡೂ ಕುಟುಂಬದ ಸದಸ್ಯರು ಭರ್ಜರಿ ತಯಾರಿ ನಡೆಸಿದ್ದಾರೆ. ಭುವಿ ಕುಟುಂಬಸ್ಥರು ಮದುವೆ ಸಾಮಾನುಗಳ ಖರೀದಿಯಲ್ಲಿ ಬ್ಯುಸಿಯಿದ್ದಾರೆ. ನವೆಂಬರ್ 8ರಂದು ತವರಿಗೆ ಬರುವ ಭುವನೇಶ್ವರ್ ನವೆಂಬರ್ 13ರವರೆಗೆ ಮದುವೆ ತಯಾರಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 16 ರಂದು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭುವಿ, ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಮೈದಾನಕ್ಕಿಳಿಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...