alex Certify
ಕನ್ನಡ ದುನಿಯಾ       Mobile App
       

Kannada Duniya

ಭೋಪಾಲ್ ಯುವಕನಿಗೆ ಯುರೋಪಿಯನ್ ಕ್ಲಬ್ ನಲ್ಲಿ ಆಡುವ ಚಾನ್ಸ್

ಭೋಪಾಲ್ ನ ಇಶಾನ್ ಸಾಹಿ ಹೊಸ ಇತಿಹಾಸ ನಿರ್ಮಿಸಿದ್ದಾನೆ. ಯುರೋಪಿಯನ್ ಫುಟ್ಬಾಲ್ ಕ್ಲಬ್ ಸದಸ್ಯತ್ವ ಪಡೆದ ಮಧ್ಯಪ್ರದೇಶದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾನೆ. ಇಶಾನ್ ಈಗ ಪಲಮೋಸ್ ಎಫ್ ಸಿ ತಂಡ ಸೇರಿದ್ದಾನೆ. ಇದು ಸ್ಪೇನ್ ನ ಅತ್ಯಂತ ಹಳೆಯ ಫುಟ್ಬಾಲ್ ಕ್ಲಬ್ ಗಳಲ್ಲೊಂದು.

ಕಳೆದ ವರ್ಷ ಅಕಾಡೆಮಿಯೊಂದರ ಪರ ಆಡಲು ಇಶಾನ್ ಸ್ಪೇನ್ ಗೆ ತೆರಳಿದ್ದ. ಆತನ ಅಧ್ಭುತ ಆಟಕ್ಕೆ ಮನಸೋತ ಪಲಮೋಸ್ ಕ್ಲಬ್, ಒಪ್ಪಂದ ಮಾಡಿಕೊಂಡಿದೆ. ಈಗಾಗ್ಲೇ ಪಲಮೋಸ್ ಪರ ಇಶಾನ್ ಒಂದು ಪಂದ್ಯ ಆಡಿದ್ದಾನೆ. ಅಂಡರ್-19 ಐ ಲೀಗ್ ನಲ್ಲೂ ಇಶಾನ್ ದೆಹಲಿ ತಂಡದ ಪರವಾಗಿ ಆಡಿದ್ದ.

11ನೇ ತರಗತಿ ಬಳಿಕ ಕಾಲೇಜು ತೊರೆದ ಇಶಾನ್ ಗೆ ಫುಟ್ಬಾಲ್ ಅಂದ್ರೆ ಪಂಚಪ್ರಾಣ. ಶಾಲೆಯಲ್ಲಿ ಶುರುವಾದ ಫುಟ್ಬಾಲ್ ಪ್ರೇಮ ಈಗ ಹೊಸ ಸಾಧನೆಗೆ ಸ್ಪೂರ್ತಿಯಾಗಿದೆ. ದೈಹಿಕವಾಗಿಯೂ ಫಿಟ್ ಆಗಿರೋದ್ರಿಂದ ಇಶಾನ್ ಗೆ ಯುರೋಪಿಯನ್ ಕ್ಲಬ್ ಪರ ಆಡುವ ಅವಕಾಶ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...