alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಾ ವ್ಯಾಪಾರಿಯ ಪುತ್ರನೀಗ ಮಿಸ್ಟರ್ ಇಂಡಿಯಾ ಇಂಟರ್ ನ್ಯಾಶನಲ್

ಭೋಪಾಲ್ ನ ಫರ್ಹಾನ್ ಚಹಾ ವ್ಯಾಪಾರಿಯ ಮಗ. ಗೋವಾದಲ್ಲಿ ನಡೆದ ಮಿಸ್ಟರ್ ನ್ಯಾಶನಲ್ ಯೂನಿವರ್ಸ್ 2018 ಸ್ಪರ್ಧೆಯಲ್ಲಿ ಗೆದ್ದಿದ್ದಾನೆ. ಮಾಡೆಲ್ ಆಗಿರೋ ಫರ್ಹಾನ್, ಮಿಸ್ಟರ್ ಇಂಡಿಯಾ ಇಂಟರ್ ನ್ಯಾಶನಲ್ ಟೈಟಲ್ ಕೂಡ ಗೆದ್ದಿದ್ದಾನೆ.

ಸದ್ಯದಲ್ಲೇ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾನೆ. ಈ ಮಾಡೆಲಿಂಗ್ ಜಗತ್ತಿಗೆ ಮಗ ಪ್ರವೇಶಿಸೋದು ಬೇಡ ಅನ್ನೋದು ತಂದೆ ಫರೀದ್ ಖುರೇಶಿ ಅವರ ಅಭಿಪ್ರಾಯ. ಹಾಗಾಗಿ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವರು ಬಿಡುತ್ತಿರಲಿಲ್ಲ.

2 ವರ್ಷ ಅಪ್ಪನ ಚಹಾ ಅಂಗಡಿಯಲ್ಲಿ ಕೆಲಸ ಮಾಡಿದ್ದ ಫರ್ಹಾನ್, ನಂತರ ಜಿಮ್ ಗೆ ಸೇರಿದ್ದ. ಅದರ ಜೊತೆಜೊತೆಗೆ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ ಗೆ ಹೋಗಲು ಆರಂಭಿಸಿದ್ದ. ಇದೀಗ ಪ್ರಶಸ್ತಿ ಗೆದ್ದಿರೋದು ಇಡೀ ಕುಟುಂಬಕ್ಕೆ ಖುಷಿ ಕೊಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...