alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಬೌಲಿಂಗ್ ಕೋಚ್ ನೇಮಕ

odi-india-team-afp_806x605_81476616792

ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಆರ್.ಶ್ರೀಧರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಸಲಹೆಗಾರರಾಗಿ ಮೊದಲು ಜಹೀರ್ ಖಾನ್ ಮತ್ತು ದ್ರಾವಿಡ್ ಹೆಸರು ಕೇಳಿಬಂದಿತ್ತು.

ಆದ್ರೆ ನಿರ್ಧಾರ ಬದಲಾಯಿಸಿದ ಬಿಸಿಸಿಐ ಹೆಡ್ ಕೋಚ್ ರವಿ ಶಾಸ್ತ್ರಿ ಸಲಹೆಯಂತೆ ಭರತ್ ಅರುಣ್ ಮತ್ತು ಆರ್. ಶ್ರೀಧರ್ ರನ್ನು ಆ ಹುದ್ದೆಗೆ ನೇಮಕ ಮಾಡಿದೆ. ಈ ಆಯ್ಕೆ ಕುರಿತ ಚರ್ಚೆಗಾಗಿ ಹೊಸದಾಗಿ ರಚನೆಗೊಂಡ ಬಿಸಿಸಿಐ ಸಮಿತಿ ಸದಸ್ಯರಾದ ಸಿ.ಕೆ.ಖನ್ನಾ, ಅಮಿತಾಭ್ ಚೌಧರಿ, ಡಯಾನಾ ಎಡುಲ್ಜಿ ಹಾಗೂ ರಾಹುಲ್ ಜೊಹ್ರಿ, ರವಿ ಶಾಸ್ತ್ರಿಯನ್ನು ಭೇಟಿ ಮಾಡಿದ್ದರು.

ಮೊದಲು ಜಹೀರ್ ಹಾಗೂ ದ್ರಾವಿಡ್ ಹೆಸರು ಹೇಳಿದ್ದ ಬಿಸಿಸಿಐ, ಈಗ ಅವರ ಸ್ಥಾನಮಾನದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ವ್ಯಕ್ತಿಗಳು ಮತ್ತು ಅವರ ಲಭ್ಯತೆ ಮೇಲೆ ಈ ತೀರ್ಮಾನ ನಿರ್ಧಾರವಾಗಿರುತ್ತದೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಇದು ದ್ರಾವಿಡ್ ಹಾಗೂ ಜಹೀರ್ ಗೆ ಮಾಡಿದ ಅವಮಾನ ಎಂಬ ಆರೋಪಗಳೂ ವ್ಯಕ್ತವಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...