alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯೊಂದಿಗೆ ಪಾಕಿಸ್ತಾನದಲ್ಲಿ ಸಾನಿಯಾ…!

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕ್ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟು ಹಲವು ವರ್ಷಗಳೇ ಕಳೆದಿವೆ. ದಂಪತಿಗಳಿಬ್ಬರೂ ತಮ್ಮ ತಮ್ಮ ಕ್ರೀಡಾ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಕಾರಣ ಬಿಡುವು ಸಿಕ್ಕಾಗ ಒಟ್ಟಿಗೆ ಕಾಲ ಕಳೆಯುತ್ತಾರೆ.

ಮಂಡಿ ನೋವಿನ ಕಾರಣಕ್ಕೆ ಮುಂಬರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿರುವ ಸಾನಿಯಾ ಮಿರ್ಜಾ, ಇದೇ ಸಮಯದಲ್ಲಿ ಪಾಕಿಸ್ತಾನದ ಲಾಹೋರ್ ಗೆ ತೆರಳಿದ್ದು, ಪತಿ ಶೋಯೆಬ್ ಮಲ್ಲಿಕ್ ಮತ್ತವರ ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ.

ಜೊತೆಗೆ ಪಾಕ್ ಕ್ರಿಕೆಟಿಗರಿಗೆ ಮಹಮ್ಮದ್ ಹಫೀಜ್ ತಮ್ಮ ಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲೂ ಪತಿ ಶೋಯೆಬ್ ಜೊತೆ ಪಾಲ್ಗೊಂಡಿದ್ದ ಸಾನಿಯಾ, ಪಾಕಿಸ್ತಾನದ ಕೆಲ ಸೆಲೆಬ್ರಿಟಿಗಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿವೆ. 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...