alex Certify
ಕನ್ನಡ ದುನಿಯಾ       Mobile App
       

Kannada Duniya

ಪುಣೆ ಎದುರು ಮುಗ್ಗರಿಸಿದ ಕೊಹ್ಲಿ ಟೀಂ

rcb-nm

ಬೆಂಗಳೂರು: ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಆರ್.ಸಿ.ಬಿ. ಸೋಲು ಕಂಡಿದೆ.

ನಿಗದಿತ ಗುರಿ ತಲುಪುವಲ್ಲಿ ವಿಫಲವಾದ ಕೊಹ್ಲಿ ಬಳಗ 27 ರನ್ ಅಂತರದಿಂದ ಸೋತಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಪುಣೆ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತು.

ಅಜಿಂಕ್ಯಾ ರೆಹಾನೆ 30, ರಾಹುಲ್ ತ್ರಿಪಾಠಿ 31, ಸ್ಟೀವನ್ ಸ್ಮಿತ್ 27, ಎಂ.ಎಸ್. ಧೋನಿ 28, ಮನೋಜ್ ತಿವಾರಿ 27 ರನ್ ಗಳಿಸಿದ್ದಾರೆ.

162 ರನ್ ಗೆಲುವಿನ ಗುರಿ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳತೊಡಗಿತು.

ಮನ್ ದೀಪ್ ಸಿಂಗ್ 0, ವಿರಾಟ್ ಕೊಹ್ಲಿ 28, ಡಿವಿಲಿಯರ್ಸ್ 29, ಕೇದಾರ್ ಜಾಧವ್ 18, ಶೇನ್ ವ್ಯಾಟ್ಸನ್ 14, ಪವನ್ ನೇಗಿ 10, ಸ್ಟುವರ್ಟ್ ಬಿನ್ನಿ 18 ರನ್ ಗಳಿಸಿದ್ದಾರೆ. ಆರ್.ಸಿ.ಬಿ. 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿ ಸೋಲು ಕಂಡಿದೆ.

ಪುಣೆ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಠಾಕೂರ್ ಮತ್ತು ಬೆನ್ ಸ್ಟೋಕ್ಸ್ ತಲಾ 3 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...