alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನಸ್ವಾಮಿಯಲ್ಲಿಂದು ಕೊಹ್ಲಿ – ಸ್ಮಿತ್ ಕದನ

rcb-kol

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸೋತ ತಂಡಗಳ ನಡುವೆ ಗೆಲುವಿಗಾಗಿ ಪೈಪೋಟಿ ನಡೆಯಲಿದೆ.

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸ್ಟೀವನ್ ಸ್ಮಿತ್ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಗಳು ಆಡಿರುವ 4 ಪಂದ್ಯಗಳಲ್ಲಿ ತಲಾ 3 ಪಂದ್ಯಗಳನ್ನು ಸೋತಿವೆ.

ಈ ಪಂದ್ಯದಲ್ಲಿ ಜಯಗಳಿಸಿ ಗೆಲುವಿನ ಲಯಕ್ಕೆ ಮರಳಲು ಉಭಯ ತಂಡಗಳು ಕಾರ್ಯತಂತ್ರ ರೂಪಿಸಿವೆ. ಆರ್.ಸಿ.ಬಿ.ಯಲ್ಲಿ ವಿರಾಟ್ ಕೊಹ್ಲಿ, ಎ.ಬಿ. ಡಿ’ವಿಲಿಯರ್ಸ್, ಕೇದಾರ್ ಜಾಧವ್, ಸ್ಯಾಮುಯೆಲ್ ಬದ್ರಿ ಹಾಗೂ ಪುಣೆ ತಂಡದಲ್ಲಿ ಸ್ಟೀವನ್ ಸ್ಮಿತ್, ಬೆನ್ ಸ್ಟೋಕ್ಸ್, ಎಂ.ಎಸ್. ಧೋನಿ, ಇಮ್ರಾನ್ ತಾಹಿರ್ ಪ್ರಮುಖ ಆಟಗಾರರಾಗಿದ್ದಾರೆ.

ಭಾನುವಾರ ರಾತ್ರಿ 8 ಗಂಟೆಗೆ ಸೋತ ತಂಡಗಳ ನಡುವೆ ಹೈ ವೋಲ್ಟೇಜ್ ಮ್ಯಾಚ್ ನಡೆಯಲಿದೆ. ಅಭಿಮಾನಿಗಳಲ್ಲಿ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...