alex Certify
ಕನ್ನಡ ದುನಿಯಾ       Mobile App
       

Kannada Duniya

4 ನೇ ಪಂದ್ಯದಲ್ಲಿ ಮುಗ್ಗರಿಸಿದ ಭಾರತ

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 4 ನೇ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದ್ದು, ಆಸ್ಟ್ರೇಲಿಯಾ 21 ರನ್ ಅಂತರದಿಂದ ಭರ್ಜರಿ ಜಯಗಳಿಸಿದೆ

335 ರನ್ ಗೆಲುವಿನ ಗುರಿ ಪಡೆದ ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 313 ರನ್ ಗಳಿಸಿ ಸೋಲು ಕಂಡಿದೆ.

ಭಾರತದ ಪರ ಅಜಿಂಕ್ಯಾ ರೆಹಾನೆ 53, ರೋಹಿತ್ ಶರ್ಮಾ 65, ವಿರಾಟ್ ಕೊಹ್ಲಿ 21, ಹಾರ್ದಿಕ್ ಪಾಂಡ್ಯ 41, ಕೇದಾರ್ ಜಾಧವ್ 67, ಮನೀಶ್ ಪಾಂಡೆ 33, ಎಂ.ಎಸ್. ಧೋನಿ 13, ಅಕ್ಷರ್ ಪಟೇಲ್ 5, ಮೊಹಮ್ಮದ್ ಶಮಿ ಅಜೇಯ 6, ಉಮೇಶ್ ಯಾದವ್ ಅಜೇಯ 2 ರನ್ ಗಳಿಸಿದ್ದಾರೆ.

ಆಸಿಸ್ ಪರವಾಗಿ ನೇಥನ್ ಕಲ್ಟರ್ ನೈಲ್ 2, ಕೇನ್ ರಿಚರ್ಡ್ ಸನ್ 3, ಆಡಂ ಜಂಪಾ 1, ಪ್ಯಾಟ್ ಕಮಿನ್ಸ್ 1 ವಿಕೆಟ್ ಪಡೆದರು. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತು.

ಆರನ್ ಫಿಂಚ್ 94, ಡೇವಿಡ್ ವಾರ್ನರ್ 124, ಟ್ರಾವಿಸ್ ಹೆಡ್ 29, ಸ್ಟೀವನ್ ಸ್ಮಿತ್ 3, ಪೀಟರ್ ಹ್ಯಾಂಡ್ಸ್ ಕಾಂಬ್ 43, ಮಾರ್ಕಸ್ ಸ್ಟೊಯ್ನಿಸ್ ಅಜೇಯ 15, ಮ್ಯಾಥ್ಯೂ ವೇಡ್ ಅಜೇಯ 3 ರನ್ ಗಳಿಸಿದ್ದಾರೆ. ಭಾರತದ ಪರವಾಗಿ ಉಮೇಶ್ ಯಾದವ್ 4, ಕೇದಾರ್ ಜಾಧವ್ 1 ವಿಕೆಟ್ ಪಡೆದಿದ್ದಾರೆ.

ಮಳೆ ಬಂದ ಕಾರಣ ಕೆಲ ಕಾಲ ಪಂದ್ಯಕ್ಕೆ ಹಿನ್ನಡೆಯಾಗಿತ್ತು. 5 ಪಂದ್ಯಗಳ ಸರಣಿಯಲ್ಲಿ ಭಾರತ 3 ಪಂದ್ಯಗಳನ್ನು ಜಯಿಸಿದೆ. ಇನ್ನೊಂದು ಪಂದ್ಯ ಬಾಕಿ ಇದೆ.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 334/5, ಭಾರತ 313/8

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...