alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತದಲ್ಲಿ ಫುಟ್ ಬಾಲ್ ಆಟಗಾರ್ತಿ ದುರ್ಮರಣ

ಬೆಂಗಳೂರು: ಭಾನುವಾರ ರಾತ್ರಿ ನಾಯಂಡಹಳ್ಳಿ ಮೇಲ್ಸೇತುವೆ ರಸ್ತೆ ಮೇಲೆ ನಡೆದ ಅಪಘಾತದಲ್ಲಿ, ಗಂಭೀರವಾಗಿ ಗಾಯಗೊಂಡಿದ್ದ ಫುಟ್ ಬಾಲ್ ಆಟಗಾರ್ತಿ ಎನ್.ಡಿ. ತೇಜಸ್ವಿನಿ ಸಾವನ್ನಪ್ಪಿದ್ದಾರೆ.

ಸಾಫ್ಟ್ ವೇರ್ ಕಂಪನಿ ಉದ್ಯೋಗಿಯಾಗಿರುವ ತೇಜಸ್ವಿನಿ ಸಂಬಂಧಿಯೊಂದಿಗೆ ಬೈಕ್ ನಲ್ಲಿ ತೆರಳುವಾಗ, ಕಾರು ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ತೇಜಸ್ವಿನಿ ಅವರ ಮೇಲೆ ಕಾರು ಹರಿದು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆ ಅರಕಲಗೂಡು ನರಸಿನಕುಪ್ಪೆಯವರಾದ ತೇಜಸ್ವಿನಿ ಕರ್ನಾಟಕ ಫುಟ್ ಬಾಲ್ ಆಟಗಾರ್ತಿಯಾಗಿದ್ದಾರೆ. ತೇಜಸ್ವಿನಿ ಅವರೊಂದಿಗೆ ಇದ್ದ ಸಂಬಂಧಿ ಕೂಡ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಬಳಿಕ ಕಾರಿನ ಸಮೇತ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...