alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಫಾ ವಿಶ್ವಕಪ್: 48 ವರ್ಷಗಳ ಹಿಂದಿನ ದಾಖಲೆ ಸರಿಗಟ್ಟಿದ ಬೆಲ್ಜಿಯಂ

ರೋಚಕತೆ ಹಾಗೂ ಕುತೂಹಲ ಹುಟ್ಟಿಸಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಮಗದೊಮ್ಮೆ ಇತಿಹಾಸದ ಪುಟ ಸೇರಿದೆ. ಆರಂಭದಲ್ಲಿ ಜಪಾನ್ ವಿರುದ್ಧ ಬೆಲ್ಜಿಯಂ 2-0 ಗೋಲುಗಳ ಹಿನ್ನಡೆ ಅನುಭವಿಸಿದ್ರೂ, ಗೆಲುವು ದಾಖಲಿಸಿದೆ. ಈ ಮೂಲಕ 48 ವರ್ಷಗಳ ಹಿಂದಿನ ದಾಖಲೆ ಸರಿಗಟ್ಟಿದೆ.

ನಿನ್ನೆ ತಡ ರಾತ್ರಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ಹಾಗೂ ಬೆಲ್ಜಿಯಂ ಕಾದಾಟ ನಡೆಸಿದವು. ಈ ಪಂದ್ಯದ ಮೊದಲಾವಧಿಯಲ್ಲಿ ಗೋಲು ದಾಖಲಾಗದಿದ್ದರೂ, ಎರಡನೇ ಅವಧಿಯ ಆಟ ಅಭಿಮಾನಿಗಳಿಗೆ ಮನೋರಂಜನೆ ನೀಡಿತು.

ಜಪಾನ್ ಎರಡನೇ ಅವಧಿಯ ಆಟದಲ್ಲಿ ಎರಡು ಗೋಲು ಬಾರಿಸಿ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿತು. ಅಲ್ಲದೆ 2-೦ ಮುನ್ನಡೆ ಸಾಧಿಸಿತು. ಬೆಲ್ಜಿಯಂ ಒತ್ತಡಕ್ಕೆ ಒಳಗಾಗದೆ ನೈಜ ಆಟ ಆಡಿತು. ಅಲ್ಲದೆ ಆಕ್ರಮಣಕಾರಿ ಆಟವಾಡಿ, ಜಪಾನ್ ರಕ್ಷಣಾ ವಿಭಾಗಕ್ಕೆ ಶಾಕ್ ನೀಡಿತು. ಅಲ್ಲದೆ ಮೂರು ಗೋಲು ಬಾರಿಸಿ ಆರ್ಭಟಿಸಿತು. ಕೊನೆಯ ಕ್ಷಣದಲ್ಲಿ ಬೆಲ್ಜಿಯಂ ಆಟಗಾರರ ಆಟ ಎಲ್ಲರ ಮನ ಗೆದ್ದಿತು.

ಈ ಪಂದ್ಯ ಇತಿಹಾಸದ ಪುಟ ಸೇರಿದೆ. ಹೌದು….ಸರಿಯಾಗಿ 48 ವರ್ಷಗಳ ಬಳಿಕ ನಾಕೌಟ್ ಹಂತದಲ್ಲಿ 2-0 ಹಿನ್ನಡೆ ಅನುಭವಿಸಿದ ತಂಡ, ಜಯ ಸಾಧಿಸಿದೆ. 1970 ರಲ್ಲಿ ಪಶ್ಚಿಮ ಜರ್ಮನಿ ತಂಡ, ಇಂಗ್ಲೆಂಡ್ ವಿರುದ್ಧ ಇಂತಹದ್ದೇ ಸಾಧನೆ ಮಾಡಿ, ವಿಶ್ವದ ಗಮನ ಸೆಳೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...