alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿಗೆ ಕ್ರಿಸ್ ಗೇಯ್ಲ್ ನೀಡಿದ್ದಾರೆ ಸ್ಪೆಷಲ್ ಗಿಫ್ಟ್

gayle-kohliಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ವೆಸ್ಟ್ ಇಂಡೀಸ್ ನ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಈಗ ಸ್ವದೇಶಕ್ಕೆ ತೆರಳಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಸಂದರ್ಭದಲ್ಲಿ ಗೇಯ್ಲ್ ಗೆಳತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಕೆಗೆ ಬ್ಲಷ್ ಎಂಬ ಹೆಸರನ್ನಿಟ್ಟಿದ್ದರು ಗೇಯ್ಲ್.

ಕ್ರಿಸ್ ಗೇಯ್ಲ್ ಅವರಿಗೆ ಭಾರತದಲ್ಲೂ ಆಪಾರ ಅಭಿಮಾನಿಗಳಿದ್ದಾರಲ್ಲದೇ ಟೀಮ್ ಇಂಡಿಯಾ ಆಟಗಾರರ ಜೊತೆ ಗೇಯ್ಲ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯವರ ಜೊತೆಗೆ ಗೇಯ್ಲ್ ಅವರದ್ದು ಆತ್ಮೀಯ ಗೆಳೆತನವಿದೆ.

ಕ್ರಿಸ್ ಗೇಯ್ಲ್ ಸ್ವದೇಶಕ್ಕೆ ತೆರಳುವ ಮುನ್ನ ಅವರ ಜೀವನಾಧರಿತ ಕುರಿತ ಪುಸ್ತಕ ‘Six Machine: I Don’t Like Cricket… I Love It’ ಬಿಡುಗಡೆಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಸಹ ಆಟಗಾರ ಎ.ಬಿ. ಡಿ ವಿಲಿಯರ್ಸ್ ಗೆ ಈ ಪುಸ್ತಕ ನೀಡಿದ್ದಾರೆ. ಜೊತೆಗೆ ಮತ್ತೊಬ್ಬ ಅತ್ಮೀಯ ಗೆಳೆಯ, ಸನ್ ರೈಸರ್ಸ್ ಹೈದರಾಬಾದ್ ತಂಡದ ಯುವರಾಜ್ ಸಿಂಗ್ ಅವರಿಗೂ ಪುಸ್ತಕ ನೀಡಿದ ಗೇಯ್ಲ್, ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...