alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆಗೆ ಚೆಂಡು ಬಡಿದು ಆಸ್ಪತ್ರೆ ಸೇರಿದ ಕ್ರಿಕೆಟಿಗ

This handout photo released by the Bangladesh Cricket Board (BCB) shows Bangladesh's international cricketer Suhrawadi Shuvo on the ground after being hit with a ball bowled by Bangladesh paceman Taskin Ahmed (L) in Dhaka on June 18, 2018. Bangladesh's international cricketer Suhrawadi Shuvo was hospitalised on June 18 after he was hit on the neck by a bouncer during a domestic league match.   / AFP PHOTO / Bangladesh Cricket Board / - / RESTRICTED TO EDITORIAL USE - MANDATORY CREDIT "AFP PHOTO / Bangladesh Cricket Board" - NO MARKETING NO ADVERTISING CAMPAIGNS - DISTRIBUTED AS A SERVICE TO CLIENTS

ಇತ್ತೀಚೆಗೆ ಕ್ರಿಕೆಟ್ ಆಟದ ಸಂದರ್ಭದಲ್ಲಿ ದುರಂತ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿವೆ. ತಲೆಗೆ ಚೆಂಡು ಬಡಿದು ಖ್ಯಾತ ಕ್ರಿಕೆಟಿಗ ಫಿಲ್ ಹ್ಯೂಸ್ ಮೃತಪಟ್ಟ ಘಟನೆ ಬಳಿಕವೂ ಅಂತಹ ಘಟನೆಗಳು ಪುನರಾವರ್ತನೆಯಾಗಿವೆ. ಈಗ ಮತ್ತೊಂದು ಪ್ರಕರಣ  ನಡೆದಿದ್ದು, ಅದೃಷ್ಟವಶಾತ್ ಆಟಗಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಢಾಕಾ ಪ್ರಿಮೀಯರ್ ಲೀಗ್ ನಲ್ಲಿ ಈ ಘಟನೆ ನಡೆದಿದ್ದು, ವಿಕ್ಟೋರಿಯಾ ಸ್ಪೋರ್ಟಿಂಗ್ ಕ್ಲಬ್ ಹಾಗೂ ಅಬಾನಿ ಲಿಮಿಟೆಡ್ ತಂಡಗಳ ನಡುವೆ ಮೀರ್ ಪುರ್ ನ ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದ ವೇಳೆ ವಿಕ್ಟೋರಿಯಾ ಸ್ಪೋರ್ಟಿಂಗ್ ಕ್ಲಬ್ ತಂಡದ ಆಟಗಾರ ಸುಹ್ರಾವಾಡಿ ಶುವೋ ಅವರ ತಲೆಗೆ ಚೆಂಡು ತಗುಲಿದೆ.

ಸುಹ್ರಾವಾಡಿ ಶುವೋ ಬ್ಯಾಟಿಂಗ್ ಮಾಡುತ್ತಿದ್ದಾಗ ಅಬಾನಿ ತಂಡದ ಬೌಲರ್ ತಸ್ಕೀನ್ ಅಹ್ಮದ್ ಎಸೆದ ಚೆಂಡು ಅವರ ತಲೆಗೆ ಬಡಿದಿದೆ. ಇದರಿಂದಾಗಿ ಅವರು ಮೈದಾನದಲ್ಲಿಯೇ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗವರು ಅಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದು, ಕೆಲ ತಿಂಗಳುಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...